ನ್ಯೂಸ್

ಕೆಎಫ್​ಸಿ ಚಿಕನ್​ ಆರ್ಡರ್​ ಮಾಡಿದ ಕುಟುಂಬಕ್ಕೆ ತಿನ್ನುವಾಗ ಕಾದಿತ್ತು ಬಿಗ್​ ಶಾಕ್​..!

ಲಂಡನ್​: ಕೆಎಫ್​ಸಿ ಚಿಕನ್​ ಅಂದ್ರೆ ಬಹುತೇಕರಿಗೆ ಬಲುಪ್ರಿಯ. ಏಕೆಂದರೆ, ಬಹಳ ರುಚಿ ಹಾಗೂ ಗರಿಗರಿಯಾಗಿರುತ್ತದೆ. ಹಾಗಂತ ಹಿಂದು-ಮುಂದು ನೋಡದೆ ಕೆಎಫ್​ಸಿ ಚಿಕನ್​ ಬಾಯಿಗಿಳಿಸಿಕೊಂಡರೆ ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಂತಿದೆ.

ಇಂಗ್ಲೆಂಡ್​ನ ವಿರ್ರಲ್ ಮೆಟ್ರೋಪಾಲಿಟನ್​ನ ಬ್ರೊಂಬರೊ ಪಟ್ಟಣದ ಬ್ರೈನ್​ ಡಿ ಆರ್ಕಿ ಮತ್ತವರ ​ಕುಟುಂಬ ಕೆಎಫ್​ಸಿ ಚಿಕಿನ್​ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿತ್ತು. ಆರ್ಡರ್​ ಮಾಡಿದಂತೆ ಕೆಎಫ್​ಸಿ ಚಿಕನ್​ ಸರ್ವ್​ ಮಾಡಿದ್ದಾರೆ. ಹಿಂದು-ಮುಂದು ನೋಡದೆ ಪ್ಲೇಟ್​ನಲ್ಲಿದ್ದ ಚಿಕನ್​ ತೆಗೆದು ಬಾಯಿಗೆ ಹಾಕಿದ ಕುಟುಂಬ ತಕ್ಷಣ ಚಿಕನ್​ ಪೀಸ್​ ಅನ್ನು ಬಾಯಿಯಿಂದ ಉಗಿದಿದ್ದಾರೆ.

ಹಾಗೇ ಉಗಿಯಲು ಕಾರಣ ಚಿಕನ್​ ಸ್ಪಲ್ಪವೂ ಬೆಂದಿರಲಿಲ್ಲ. ಬೇಯುವುದಿರಲಿ ಅದು ಕಚ್ಛಾ ಮಾಂಸವಾಗಿತ್ತು ಮತ್ತು ರಕ್ತಸಿಕ್ತ ರುಚಿ ಬರುತ್ತಿತ್ತು ಎಂಬುದು ಕುಟುಂಬದ ಆರೋಪವಾಗಿದೆ. ತಕ್ಷಣ ಹೋಟೆಲ್​ ಮ್ಯಾನೇಜರ್ ಜತೆ ವಾಗ್ವಾದಕ್ಕಿಳಿದ ಕುಟುಂಬ ಇನ್ಯಾರಿಗೂ ಈ ರೀತಿಯ ಆಹಾರವನ್ನು ಸರ್ವ್​ ಮಾಡಬೇಡಿ ಎಂದು ಬುದ್ಧಿವಾದ ಹೇಳಿದೆ. ​

ಚಿಕನ್​ ಜತೆ ಇನ್ನಿತರ ತಿನ್ನುವ ಪದಾರ್ಥವನ್ನು ಕುಟುಂಬ ಕೊಂಡುಕೊಂಡದ್ದರಂತೆ. ಆದರೆ, ಹಸಿಮಾಂಸ ಮತ್ತು ರಕ್ತಸಿಕ್ತ ರುಚಿ ಬಂದಿದ್ದರಿಂದ ಇತರೆ ಆಹಾರವನ್ನು ತಿನ್ನಲು ಮನಸ್ಸಾಗಲಿಲ್ಲ ಎನ್ನುತ್ತಾರೆ ಬ್ರೈನ್​ ಡಿ ಆರ್ಕಿ.

ಮ್ಯಾನೇಜರ್​ ಮಾತನಾಡಿ ನಾವು ಸರಿಯಾಗಿ ಬೇಯಿಸಿದ್ದೇವೆ. ಕೆಲವೊಮ್ಮೆ ತಾಜಾ ಮಾಂಸ ಬೇಯಿಸಿದಾಗಲೂ ಅದೇ ಬಣ್ಣವನ್ನೇ ತೋರುತ್ತದೆ ಎಂದು ಹೇಳಿದ್ದಾರೆ. ಕುಟುಂಬಕ್ಕೆ ಹಣವನ್ನು ವಾಪಸ್ಸು ನೀಡಿರುವ ಕೆಎಫ್​ಸಿ ಕೇಂದ್ರ, ಆರ್ಕಿ ಕುಟುಂಬಕ್ಕೆ ಕ್ಷಮೆಯನ್ನು ಕೋರಿದೆ. ಇನ್ನೆಂದು ಹೀಗಾಗದ ರೀತಿ ನೋಡಿಕೊಳ್ಳುವ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಏನೇ ಆಗಲಿ ಮಾಂಸ ತಿನ್ನುವಾಗ ಒಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ ಎಂಬುದು ಅನೇಕರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)