ವಾರಾಣಸಿ: ಬನಾರಸ್ ಹಿಂದೂ ಯುನಿವರ್ಸಿಟಿ ಟ್ರಾಮಾ ಸೆಂಟರ್ನಲ್ಲಿ ರೋಗಿಗಳು ಇರುವಾಗಲೇ ಛಾವಣಿಯ ಮೇಲುಹಾಸು ಕಿತ್ತುಬಿದ್ದ ಪ್ರಕರಣವೊಂದು ನಡೆದಿದೆ. ಉತ್ತರಪ್ರದೇಶದ ವಾರಣಾಸಿಯಲ್ಲಿ ನಿನ್ನೆ ಈ ಪ್ರಕರಣ ನಡೆದಿದೆ.
ಅನೇಕ ರೋಗಿಗಳ ನಿಗಾ ವಹಿಸಲಾಗಿದ್ದ ಈ ಕೊಠಡಿಯಲ್ಲಿನ ಛಾವಣಿಯ ಮೇಲುಹಾಸು ಕಿತ್ತುಬಿದ್ದ ದೃಶ್ಯದ ವಿಡಿಯೋ ವೈರಲ್ ಆಗಿದೆ. ಅದಾಗ್ಯೂ ಈ ಪ್ರಕರಣದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ಛಾವಣಿಯ ಮೇಲುಹಾಸಿನ ಅವಶೇಷಗಳು ವಾರ್ಡ್ ತುಂಬಾ ಬಿದ್ದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಇದನ್ನೂ ಓದಿ: ಪ್ರಯಾಣದಲ್ಲಿದ್ದ ತಮಿಳುನಾಡು ಸಚಿವರಿಗೆ ಹಠಾತ್ ಎದೆನೋವು; ನಾರಾಯಣ ಹೆಲ್ತ್ ಸಿಟಿಗೆ ಕರೆ ತರುತ್ತಿರುವ ಬೆಂಬಲಿಗರು
ಬನಾರಸ್ ಹಿಂದೂ ವಿಶ್ವವಿದ್ಯಾಲಯ ಆವರಣದ ಸರ್ ಸುಂದರ್ಲಾಲ್ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ಆರೋಗ್ಯ ವಿಭಾಗವನ್ನು ಎರಡು ವರ್ಷಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಈಗ ಅದೇ ವಿಭಾಗದಲ್ಲಿನ ಒಂದು ಭಾಗದಲ್ಲಿ ಈ ಛಾವಣಿ ಮೇಲುಹಾಸು ಕಳಚಿ ಬಿದ್ದಿದೆ. -ಏಜೆನ್ಸೀಸ್