rapido; ಖಚಿತ ಸೇವೆಗಳು ಮತ್ತು ಕ್ಯಾಶ್‌ಬ್ಯಾಕ್ ಪ್ರಯೋಜನಗಳ ಭರವಸೆ ನೀಡಿ, ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ರೈಡ್-ಹೇಲಿಂಗ್ ಕಂಪನಿ ರ‍್ಯಾಪಿಡೊಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) 10 ಲಕ್ಷ ರೂ. ದಂಡ ವಿಧಿಸಿದೆ.
ಇದನ್ನೂ ಓದಿ: ಮಲಗುವ ಮುನ್ನ ಇವುಗಳನ್ನು ತಿನ್ನುತ್ತೀರಾ.? ಕೆಟ್ಟ ನಿದ್ರೆ ಜೊತೆ, ಕೆಟ್ಟ ಕನಸು ಬೀಳಲು ಇದೇ ಕಾರಣ ನೋಡಿ| sleep
ಜಾಹೀರಾತುಗಳು ದಾರಿತಪ್ಪಿಸುವಂತಿದ್ದವು ಮಾತ್ರವಲ್ಲದೆ ದೀರ್ಘಕಾಲದವರೆಗೆ ಪ್ರಸಾರವಾಗುತ್ತಿದ್ದವು. ಇದರಿಂದಾಗಿ ಅವುಗಳ ಪರಿಣಾಮ ಹೆಚ್ಚಾಯಿತು ಎಂದು ಗ್ರಾಹಕ ರಕ್ಷಣಾ ಪ್ರಾಧಿಕಾರ ಹೇಳಿದೆ. 120 ಕ್ಕೂ ಹೆಚ್ಚು ನಗರಗಳಲ್ಲಿ ಹಲವಾರು ಭಾಷೆಗಳಲ್ಲಿ ಜಾಹೀರಾತುಗಳನ್ನು ಸುಮಾರು ಒಂದೂವರೆ ವರ್ಷಗಳ ಕಾಲ ಪ್ರಸಾರ ಮಾಡಲಾಗಿದೆ ಎಂದು ಡೇಟಾ ತಿಳಿಸಿದೆ.
ಗ್ಯಾರಂಟಿಡ್ ಆಟೋ ಮತ್ತು 5 ನಿಮಿಷಗಳಲ್ಲಿ ಆಟೋ ಅಥವಾ 50 ರೂ. ಪಡೆಯಿರಿ ಎಂಬ ಮುಂತಾದ ಜಾಹೀರಾತುಗಳನ್ನು ಪ್ರಚಾರ ಮಾಡಿ ಗ್ರಾಹಕರನ್ನು ದಾರಿ ತಪ್ಪಿಸಿದೆ ಎಂಬ ದೂರುಗಳನ್ನು ಅನುಸರಿಸಿ ದಂಡ ವಿಧಿಸಲಾಗಿದೆ. ಭರವಸೆ ನೀಡಿದ 50 ರೂ. ಪರಿಹಾರವನ್ನು ನಗದು ರೂಪದಲ್ಲಿ ನೀಡಲಾಗಿಲ್ಲ, ಬದಲಾಗಿ ರಾಪಿಡೋ ನಾಣ್ಯಗಳು ಎಂದು ನೀಡಲಾಯಿತು. ಇವುಗಳನ್ನು ಬೈಕ್ ಸವಾರರು ಮಾತ್ರ ಬಳಸಬಹುದಾಗಿತ್ತು. ಇದು ಕೇವಲ ಏಳು ದಿನಗಳವರೆಗೆ ಮಾನ್ಯವಾಗಿತ್ತು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ನಿಮ್ಮ ಕೂದಲು ಹೆಚ್ಚಾಗಿ ಉದುರುತ್ತಿದೆಯಾ.? ಹಾಗಿದ್ರೆ ನಿರ್ಲಕ್ಷಿಸಬೇಡಿ ಇದು ಇತರ ಕಾಯಿಲೆಯ ಲಕ್ಷಣವಾಗಿರಬಹುದು| hair fall
(ಏಜೆನ್ಸೀಸ್)
ದಂಡದ ಜೊತೆ ದಾರಿತಪ್ಪಿಸುವ ಜಾಹೀರಾತುಗಳನ್ನು ತಕ್ಷಣವೇ ಹಿಂಪಡೆಯಲು ಆದೇಶಿಸಲಾಗಿದೆ. ಎಲ್ಲಾ ಬಾಧಿತ ಬಳಕೆದಾರರಿಗೆ ಭರವಸೆ ನೀಡಿದ 50 ರೂ.ಗಳನ್ನು ಪೂರ್ಣವಾಗಿ ಮರುಪಾವತಿಸುವಂತೆ ಮತ್ತು 15 ದಿನಗಳಲ್ಲಿ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಕಂಪನಿಗೆ ನಿರ್ದೇಶಿಸಲಾಗಿದೆ.
ಇನ್ನೂ ಈ ಬಗ್ಗೆ ರ‍್ಯಾಪಿಡೊ ಜೂನ್ 2024 ಮತ್ತು ಜುಲೈ 2025 ರ ನಡುವೆ 1,200 ಕ್ಕೂ ಹೆಚ್ಚು ಗ್ರಾಹಕ ದೂರುಗಳನ್ನು ಸ್ವೀಕರಿಸಿದೆ. ಈ ದೂರುಗಳಲ್ಲಿ ಅರ್ಧದಷ್ಟು ಬಗೆಹರಿಯದೆ ಉಳಿದಿವೆ. ದೂರುಗಳಲ್ಲಿ ಅಧಿಕ ಶುಲ್ಕ, ಮರುಪಾವತಿ ವಿಳಂಬ, ಚಾಲಕರ ಅನುಚಿತ ವರ್ತನೆ ಮತ್ತು ಕಂಪನಿಯ ಕ್ಯಾಶ್‌ಬ್ಯಾಕ್ ಭರವಸೆಗಳನ್ನು ಪೂರೈಸುವಲ್ಲಿ ವಿಫಲವಾದ ಪ್ರಕರಣಗಳ ಬಗ್ಗೆ ದೂರು ನೀಡಲಾಗಿದೆ.