Fake Swamiji: ಹಿಮಾಲಯದಲ್ಲಿ ಸಿಗುವ ಗಿಡಮೂಲಿಕೆಗಳ ಬೂದಿಯಿಂದ ಚಿನ್ನ ಮಾಡುವುದಾಗಿ ನಕಲಿ ಸ್ವಾಮೀಜಿಯೊಬ್ಬರು ಹೈದರಾಬಾದ್ ಬಂಜಾರ್ ಹಿಲ್ಸ್ನ ಓರ್ವ ವ್ಯಕ್ತಿ 10 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಸೋಮವಾರ (ಆಗಸ್ಟ್ 11) ವರದಿಯಾಗಿದೆ.
ನಾಗ್ಪುರದಿಂದ ಬಂದಿದ್ದ ನಕಲಿ ಸ್ವಾಮೀಜಿ, ಬಂಜಾರ ಹಿಲ್ಸ್ನ ಗೋಪಾಲ್ ಸಿಂಗ್ ಎಂಬುವರಿಗೆ ನಿಮ್ಮನ್ನು ಕಷ್ಟಗಳಿಂದ ಮುಕ್ತಿ ಮಾಡಲು 2 ಕೆಜಿ ಚಿನ್ನ ಮಾಡುವುದಾಗಿ ಭರವಸೆ ನೀಡಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕುರಿತು ಮಾತನಾಡಿರುವ ಠಾಣೆಯ ಅಧಿಕಾರಿ, ನಕಲಿ ಸ್ವಾಮೀಜಿಗಳು ಹಿಮಾಲಯದಿಂದ ತಂದ ಗಿಡಮೂಲಿಕೆ ಬೂದಿಯಿಂದ ಚಿನ್ನ ಮಾಡ್ತೇವೆ ಎಂದು ಸಂತ್ರಸ್ತರನ್ನು ನಂಬಿಸಿದ್ದಾರೆ. ಒಂದು ತಿಂಗಳ ಕಾಲ ನಕಲಿ ಸ್ವಾಮೀಜಿ ಪೂಜೆ ಸಲ್ಲಿಸಿದ ನಂತರ ಕೆಂಪು ಬಟ್ಟೆಯಲ್ಲಿ ಸುತ್ತಿದ ವಸ್ತು ನೀಡಿದ್ದಾರೆ. ಒಂದು ವಾರಗಳ ಕಾಲ ಅದನ್ನು ಮನೆಯಲ್ಲಿ ಇಡಿ ಬಳಿ ಅದರಲ್ಲಿ 2 ಕೆಜಿ ಚಿನ್ನವಿರುತ್ತೆ ಎಂದು ಹೇಳಿದ್ದಾರೆ. ಅದನ್ನು ಕೊಡಲು 10 ಲಕ್ಷ ರೂ. ಪಡೆದುಕೊಂಡಿದ್ದಾರೆ. ಅನುಮಾನ ಬಂದು 5 ದಿನದಲ್ಲಿ ಬಟ್ಟೆ ಬಿಚ್ಚಿದಾಗ ಅದರಲ್ಲಿ ಚಿನ್ನದ ಬಣ್ಣ ನಕಲಿ ಕಬ್ಭಿಣದ ತುಂಡುಗಳು ಸಿಕ್ಕಿದ್ದಾವೆ. ತಾವು ಮೋಸ ಹೋಗಿರುವುದು ತಿಳಿದಿದ್ದು, ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ವಂಚನೆಗೊಳಗಾದ ವ್ಯಕ್ತಿಯ ದೂರಿನನ್ವಯ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಾಗಿ ಬಂಜಾರ ಹಿಲ್ಸ್ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. (ಏಜೆನ್ಸೀಸ್)