

Nidhhi Agerwal : ಪವನ್ ಕಲ್ಯಾಣ್ ಅಭಿನಯದ ಹರಿ ಹರ ವೀರ ಮಲ್ಲು ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಾಯಕಿ ನಿಧಿ ಅಗರ್ವಾಲ್ ವಿಜಯವಾಡದಲ್ಲಿ ಆಂಧ್ರಪ್ರದೇಶದ ಸರ್ಕಾರಿ ಕಾರಿನಲ್ಲಿ ಇತ್ತಿಚೆಗೆ ಪ್ರಯಾಣಿಸುತ್ತಿರುವ ವಿಡಿಯೋ ಎಲ್ಲೆಡೆ ಚರ್ಚೆಯಾಗಿದೆ.
ವಿಡಿಯೋದಲ್ಲಿ ಕಾರಿನ ನಂಬರ್ ಪ್ಲೇಟ್ನಲ್ಲಿ ಆನ್ ಗವರ್ನಮೆಂಟ್ ಡ್ಯೂಟಿ' ಎಂದು ಬರೆಯಲಾಗಿದೆ. ವರದಿಯ ಪ್ರಕಾರ, ನಟಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಾಲ್ಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.
ಇನ್ನು ನಿಧಿಗೆ ಪ್ರಯಾಣಿಸಲು ಸರ್ಕಾರಿ ವಾಹನ ಹೇಗೆ ಸಿಕ್ಕಿತು ಎಂದು ನೆಟಿಜನ್ಗಳು ಆಶ್ಚರ್ಯವಾಗಿದ್ದರೆ, ಇನ್ನೂ ಕೆಲವರು ಪವನ್ ಕಲ್ಯಾಣ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂಷಿಸಿದ್ದಾರೆ.
ಸರ್ಕಾರವು ಸಿನಿಮಾ ನಟರಿಗೆ ಓಡಾಡಲು ಸರ್ಕಾರಿ ವಾಹನ ನೀಡುತ್ತದೆಯೇ? ಎಂದು ಓರ್ವ X ಬಳಕೆದಾರ ಪ್ರತಿಕ್ರಿಸಿದ್ದಾನೆ. ಇನ್ನೊಬ್ಬ X ಬಳಕೆದಾರ @PawanKalyan ಡಿಸಿಎಂ ನಿಮ್ಮಂತೆ ಪವರ್ ಬಳಸುವುದು ಬೇರೆ ಯಾರಿಗೂ ತಿಳಿದಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನು ಜನರು ನಿಮಗೆ ಅಧಿಕಾರ ಕೊಟ್ಟಿದ್ದು ಅವರಿಗೆ ಒಳ್ಳೆಯದನ್ನು ಮಾಡಲು @PawanKalyan ನಿಮ್ಮೊಂದಿಗೆ ನಟಿಸಿದ ನಾಯಕಿಯರಿಗೆ ಸರ್ಕಾರಿ ವಾಹನಗಳನ್ನು ಒದಗಿಸಲು ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಚರ್ಚೆ ಭಾರಿಯಾಗಿದ್ದರೂ, ನಟಿ ನಿಧಿ ಸರ್ಕಾರಿ ವಾಹನದಲ್ಲಿ ಪ್ರಯಾಣಿಸುವ ಬಗ್ಗೆ ಯಾವುದೇ ಹೇಳಿಕೆಯನ್ನು ಹಂಚಿಕೊಂಡಿಲ್ಲ.( ಏಜೆನ್ಸೀಸ್)