ಬೆಂಗಳೂರು: ಇಲ್ಲೊಬ್ಬ ವ್ಯಕ್ತಿ, ನೆಲಮಂಗಲದ ಬಳಿ, ವೈದ್ಯನ ಸೋಗು ಹಾಕಿಕೊಂಡು ಆಯುರ್ವೇದದ ಅಂಗಡಿ ಇಟ್ಟುಕೊಂಡಿದ್ದ. ಈತನ ಅಸಲಿಯತ್ತು ತಿಳಿಯದ ಅದೆಷ್ಟು ಮಂದಿ ಮೊಸ ಹೋಗಿದ್ದಾರೋ ಏನೋ. ಆದರೆ ಈ ಮಹಿಳೆ ಕಾಲು ನೋವಿನಿಂದ ಬಳಲಿ ಚಿಕಿತ್ಸೆಗೆ ಎಂದು ಬಂದಾಗ ಈತನ ಅಸಲಿಯತ್ತು ಬಯಲಾಗಿದೆ.
ರಾಜಸ್ಥಾನ ಮೂಲದ ಮೊಹಮ್ಮದ್ ಸಮೀನ್ ಎಂಬಾತನೇ ಈಗ ಬಂಧಿಸಲ್ಪಟ್ಟಿರುವುದು. ಇತ್ತೀಚೆಗೆ ಪಂಕಜ್ ಎಂಬುವವರ ತಾಯಿ ಕಾಲಿನ ನೋವಿನಿಂದ ಬಳಲುತ್ತಿದ್ರು. ಈ ಮೊಹಮ್ಮದ್ ಸಮೀನ್ನನ್ನು ಆರ್ಯುವೇದ ವೈದ್ಯನೆಂದು ನಂಬಿದ್ದ ಪಂಕಜ್, ತನ್ನ ತಾಯಿಯನ್ನು ಈತನ ಬಳಿಗೆ ಕರೆದುಕೊಂಡು ಬಂದಿದ್ದಾನೆ.
ಕಾಲಿನಲ್ಲಿ ಕೀವು ತುಂಬಿಕೊಂಡಿದೆ. ಅದನ್ನ ಚಿಕಿತ್ಸೆ ನೀಡಿ ಸರಿ ಮಾಡ್ತಿನಿ ಎಂದಿದು ಸಮೀನ್ ಹೇಳಿದ್ದ. ಆದರಂತೆ ಒಂದು ಡ್ರಾಫ್ ಕೀವನ್ನ ತೆಗೆಯಲು ನಾಲ್ಕು ಸಾವಿರದಂತೆ 8 ಲಕ್ಷ ಹಣವನ್ನು ಪಂಕಜ್ನಿಂದ ಪೀಕಿದ್ದ. ಅಸಲಿಗೆ ಈತ ಯಾವುದೇ ಚಿಕಿತ್ಸೆ ನೀಡಿರಲಿಲ್ಲ. ನಂತರ ಈತ 8 ಲಕ್ಷ ರೂ. ಜಣ ಪಡೆದು ಎಸ್ಕೇಫ್ ಆಗಿದ್ದ. ಈ ವಿಷಯ ಪಂಕಜ್ ಗಮನಕ್ಕೆ ಬರುತ್ತಿದ್ದಂತೆ, ಪಂಕಜ್, ಘಟನೆ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ನೀಡಿದ್ದ.
ಈ ದೂರಿನ ಅನ್ವಯ ನಕಲಿ ಆಯುರ್ವೇದ ವೈದ್ಯ ಮೊಹಮ್ಮದ್ ಸಮೀನ್ನನ್ನು ಬಂಧಿಸಲಾಗಿದೆ. ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿತನಿಂದ 4 ಕಾರು 3 ಬೈಕ್ 3.50 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.