ನ್ಯೂಸ್

ಕರೊನಾ ವೈರಸ್​ ಸೋಂಕು ವದಂತಿ ತಪ್ಪಿಸಲು ಕೆಳಕಂಡ ಜಾಲತಾಣದಿಂದ ಮಾತ್ರ ಮಾಹಿತಿ ಪಡೆಯಿರಿ

kumarvrl

ನವದೆಹಲಿ: ವಿಶ್ವ ವ್ಯಾಪಿ ಕರೊನಾ ವೈರಸ್​ ತೀವ್ರವಾಗಿ ಹರಡುತ್ತಿರುವ ಬೆನ್ನಲ್ಲೇ ಕರೊನಾ ವೈರಸ್​, ಹರಡುವ ಬಗ್ಗೆ, ವೈರಸ್​ ಸೋಂಕು ತಗುಲಿದಾಗ ಉಂಟಾಗುವ ಪರಿಣಾಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ.

ಸುಳ್ಳು ವದಂತಿಯಿಂದ ಸಾರ್ವಜನಿಕರು ಭೀತಿಗೊಳ್ಳುವ ಹಿನ್ನೆಲೆಯಲ್ಲಿ ಕರೊನಾ ವೈರಸ್​ ಬಗ್ಗೆ ಯಾವ ಮೂಲದಿಂದ ಮಾಹಿತಿ ಪಡೆಯಬೇಕು ಎಂಬುದರ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕರೊನಾ ವೈರಸ್​ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೆಳಕಂಡ ಸಾಮಾಜಿಕ ಜಾಲ ತಾಣದಿಂದ ಮಾಹಿತಿ ಪಡೆಯುವಂತೆ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ. ಈ ತಾಣಗಳಲ್ಲಿ ಲಭ್ಯವಾಗುವ ಮಾಹಿತಿ ಅಧಿಕೃತ ಎಂದು ಇಲಾಖೆ ತಿಳಿಸಿದೆ.

ಅಧಿಕೃತ ಜಾಲತಾಣಗಳು ಯಾವುವು:


ಕೇಂದ್ರ ಆರೋಗ್ಯ ಸಚಿವಾಲಯದ ಟ್ವಿಟ್ಟರ್ ಹ್ಯಾಂಡಲ್: twitter​@MOHFW_INDIA
ಕೇಂದ್ರ ಆರೋಗ್ಯ ಸಚಿವಾಲಯದ ಫೇಸ್​ಬುಕ್​ ಖಾತೆ: facebook@MOHFWindia
ಕೇಂದ್ರ ಸರ್ಕಾರದ ಪ್ಪ್ರೆಸ್​ ಇನ್ಫರ್ಮೇಷನ್​ ಆಫ್​ ಬ್ಯೂರೋದ ಟ್ವಿಟರ್​ ಹ್ಯಾಂಡಲ್​: twitter​@PIB_india ಹಾಗೂ twitter​@PIBHindi
ಫೇಸ್​ ಬುಕ್​ ಖಾತೆ : facebook​@pibindia
ಕೇಂದ್ರ ಆರೋಗ್ಯ ಸಚಿವರ ಟ್ವಿಟರ್​ ಹ್ಯಾಂಡಲ್​: twitter​@drharshvardhan
ಫೇಸ್​ಬುಕ್​ ಖಾತೆ: facebook@drharshvardhanofficial
ವಿಶ್ವ ಆರೋಗ್ಯ ಸಂಸ್ಥೆಯ ಟ್ವಿಟರ್​ ಹ್ಯಾಂಡಲ್​: twitter​@WHO
ವಿಶ್ವ ಆರೋಗ್ಯ ಸಂಸ್ಥೆಯ ಫೇಸ್​ಬುಕ್​ ಖಾತೆ: facebook​@WHO
ಇವುಗಳಿಂದ ಮಾತ್ರ ಅಧಿಕೃತ ಮಾಹಿತಿ ಪಡೆಯಿರಿ ಎಂದು ಇಲಾಖೆ ತಿಳಿಸಿದೆ. (ಏಜೆನ್ಸೀಸ್​)