ಮುಂಬೈ: ಟೈರ್ ಸ್ಪೋಟಗೊಂಡು ಖಾಸಗಿ ಬಸ್ ಒಂದು ಬೆಂಕಿಗಾಹುತಿಯಾಗಿ 25ಕ್ಕೂ ಹೆಚ್ಚು ಮಂದಿ ಸಜೀವ ದಹನ ಆಗಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಮೃದ್ದಿ ಎಕ್ಸ್ಪ್ರೆಸ್ವೇನಲ್ಲಿ ನಡೆದಿದೆ.
ಘಠನೆಯೂ ರಾತ್ರಿ 1:30ರ ಸುಮಾರಿಗೆ ನಡೆದಿದ್ದು, ನಾಗ್ಪುರದಿಂದ ಪುಣೆಯತ್ತ ತೆರಳುವಾಗ ಬುಲ್ಧಾನ ಜಿಲ್ಲೆಯ ಸಿಂದ್ಖೇಡಾರಾಜಾ ಸಮೀಪ ಟೈರ್ ಸ್ಪೋಟಗೊಂಡಿದ್ದು ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಇದಿರಿಂದಾಗಿ ಬಸ್ ಹೊತ್ತಿಕೊಂಡು ಉರಿದಿದೆ.
ಬಸ್ನಲ್ಲಿ ಒಟ್ಟು 33 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಬಸ್ ಆವರಿಸಿದ ಪರಿಣಾಮ 25 ಜನ ಸಜೀವ ದಹನವಾಗಿದ್ಧಾರೆ. ಘಟನೆಯಲ್ಲಿ ಗಾಯಗೊಂಡಿರುವ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರತ್ಯಕ್ಷದರ್ಶಿ ರಾಮೇಶ್ವರ್ ದರಾದೆ ನಾಣು ತಡರಾತ್ರಿ 1:30ರ ಸುಮಾರಿಗೆ ಸ್ಫೋಟದ ಶಬ್ದ ಕೇಳಿಸಿತ್ತು. ಕೂಡಲ್ಲೇ ನಾನು ಹಾಗೂ ಇನ್ನಿಬ್ಬರು ಸ್ಥಳಕ್ಕೆ ತೆರಳಿದಾಗ ಕ್ಷಣಾರ್ಧದಲ್ಲೇ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಜನ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು ಆದರೆ, ನಾವು ಏನೂ ಮಾಡದ ಪರಿಸ್ಥಿತಿಯಲ್ಲಿದ್ದೆವು ಎಂದು ತಿಳಿಸಿದ್ಧಾರೆ.