ನ್ಯೂಸ್

ನಿಮ್ಮ ಅಂಗೈನಲ್ಲಿ M ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Palmistry

Palmistry : ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನಾಗುತ್ತದೆ? ಉದ್ಯೋಗ ಸಿಗುತ್ತದೆಯೇ ಅಥವಾ ಇಲ್ಲವೇ? ಮದುವೆ ಆಗುತ್ತಾ? ಜೀವನದಲ್ಲಿ ಸೆಟಲ್​ ಆಗ್ತೀನಾ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಜನರು ತೋರಿಸುತ್ತಾರೆ. ಆದರೆ, ಕೆಲವರಿಗೆ ಈ ಜ್ಯೋತಿಷ್ಯದ ಮೇಲೆ ನಂಬಿಕೆ ಇರುವುದಿಲ್ಲ. ಆದರೂ ಬಹುತೇಕ ಮಂದಿ ಜಾತಕವನ್ನು ನಂಬುತ್ತಾರೆ. ಈ ಕಾರಣಕ್ಕೆ ಜ್ಯೋತಿಷಿಗಳಿಗೆ ತುಂಬಾ ಬೇಡಿಕೆ ಇದೆ.

ಅಂದಹಾಗೆ ನಮ್ಮ ಗ್ರಹಗತಿ ಆಧಾರದ ಮೇಲೆ ನಮ್ಮ ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾಗಿದೆ. ಜ್ಯೋತಿಷ್ಯದಲ್ಲಿ ಹಲವು ವಿಧಾನಗಳಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಹಸ್ತ ಸಾಮುದ್ರಿಕಾ ( Palmistry ) ಕೂಡ ಒಂದು. ಹಸ್ತ ಸಾಮುದ್ರಿಕ ಎಂದರೆ ಹಸ್ತದ ಮೇಲಿನ ರೇಖೆಗಳ ಆಧಾರದ ಮೇಲೆ ಭವಿಷ್ಯವನ್ನು ಊಹಿಸುವುದು. ಈ ಹಸ್ತಸಾಮುದ್ರಿಕ ಶಾಸ್ತ್ರವನ್ನು ನಂಬುವ ಅನೇಕ ಜನರಿದ್ದಾರೆ. ಅವರಲ್ಲಿ ಸಾಮಾನ್ಯ ನಾಗರಿಕರಷ್ಟೇ ಅಲ್ಲ ಸೆಲೆಬ್ರಿಟಿಗಳು ಕೂಡ ಇದ್ದಾರೆ.

ನಮ್ಮ ಅಂಗೈನಲ್ಲಿ ವಿವಿಧ ರೀತಿಯ ರೇಖೆಗಳು ಅಥವಾ ಗೀರುಗಳಿವೆ. ಈ ಗೆರೆಗಳಿಂದಾಗಿ ಕೆಲವೊಂದು ಚಿಹ್ನೆಗಳು ಕೂಡ ರಚನೆಯಾಗಿವೆ. ಆ ಗೆರೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವರಿಗೆ ಅಂಗೈ ಮಧ್ಯದಲ್ಲಿ ಆಂಗ್ಲ ಅಕ್ಷರ ‘M’ ಆಕಾರದಲ್ಲಿ ಗುರುತು ಕಾಣಿಸುತ್ತದೆ. ನಿಮ್ಮ ಕೈಯಲ್ಲಿ ಈ ಗುರುತು ಇದೆಯಾ ಒಮ್ಮೆ ಚೆಕ್​ ಮಾಡಿಕೊಳ್ಳಿ. ಅಂಗೈಯಲ್ಲಿ ಈ M ಚಿಹ್ನೆ ಇದ್ದರೆ ಏನಾಗುತ್ತದೆ ಎಂಬುದನ್ನು ನಾವೀಗ ತಿಳಿಯೋಣ.

ಈ M ಚಿಹ್ನೆಯು ಲೈಫ್ ಲೈನ್, ಹೆಡ್ ಲೈನ್ ಮತ್ತು ಹಾರ್ಟ್ ಲೈನ್​ನಿಂದ ರೂಪುಗೊಂಡಿದೆ. ಲೈಫ್​ ಲೈನ್​ ಮಣಿಕಟ್ಟಿನಿಂದ ಮೇಲಕ್ಕೆ ವಿಸ್ತರಿಸುತ್ತದೆ ಮತ್ತು ಹೆಡ್​ಲೈನ್​, ಹಾರ್ಟ್​ ಲೈನ್​ ಅನ್ನು ದಾಟುತ್ತದೆ. ಇದು ಲೈಫ್ ಲೈನ್, ಹೆಡ್ ಲೈನ್ ಮತ್ತು ಹಾರ್ಟ್​ಲೈನ್​ನೊಂದಿಗೆ ಓರೆಯಾದ M ಚಿಹ್ನೆಯನ್ನು ರೂಪಿಸುತ್ತದೆ. ಅಂಗೈಯಲ್ಲಿರುವ M ಚಿಹ್ನೆಯು ಹಣ ಮತ್ತು ಪ್ರೀತಿಯ ಅದೃಷ್ಟವನ್ನು ಪ್ರತಿನಿಧಿಸುತ್ತದೆ.

M ಚಿಹ್ನೆಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ಉನ್ನತ ಮನಸ್ಸಿನವರು. ಅವರು ತಮ್ಮ ಕನಸುಗಳಿಗಾಗಿ ಶ್ರಮಿಸುತ್ತಾರೆ ಮತ್ತು ತಾವು ಬಯಸಿದನ್ನು ಸಾಧಿಸದೇ ಬಿಡುವುದಿಲ್ಲ. ಆದ್ದರಿಂದ, ಈ ಜನರು ಹೆಚ್ಚಾಗಿ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ಮನ್ನಣೆಯನ್ನೂ ಗಳಿಸುತ್ತಾರೆ. 40 ವರ್ಷಗಳಲ್ಲಿ ಖ್ಯಾತಿ ಮತ್ತು ಹಣವನ್ನು ಪಡೆಯುತ್ತಾರೆ.

M ಚಿಹ್ನೆಯನ್ನು ಹೊಂದಿರುವ ಜನರು ಉದ್ಯಮದಲ್ಲಿ ಮಾಸ್ಟರ್ಸ್ ಆಗಿರುತ್ತಾರೆ. ನಾಲ್ಕೈ ತಲೆಮಾರುಗಳಿಗೆ ಸಾಕಷ್ಟು ದೊಡ್ಡ ಸಂಪತ್ತನ್ನು ಸಂಗ್ರಹಿಸುತ್ತಾರೆ ಮತ್ತು ಮಿಲಿಯನೇರ್ ಆಗುತ್ತಾರೆ. ಈ ಚಿಹ್ನೆ ಉಳ್ಳವರು ಉತ್ಸಾಹಿ, ಸಹಾನುಭೂತಿ, ಸೃಜನಶೀಲರು ಮತ್ತು ಇತರರು ನಿರ್ಲಕ್ಷಿಸುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅವರಿಗೆ ಯಾವುದೇ ಕಾರ್ಯವನ್ನು ನಿಯೋಜಿಸಿದರೆ, ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. (ಏಜೆನ್ಸೀಸ್​)