ನ್ಯೂಸ್

Exit Polls| ಮಹಾರಾಷ್ಟ್ರದಲ್ಲಿ ಮಹಾಯುತಿ, ಜಾರ್ಖಂಡ್​ನಲ್ಲಿ ಬಿಜೆಪಿಗೆ ಮಣೆ ಹಾಕಿದ ಮತದಾರ; ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಮ್ಮೆ ಮುಖಭಂಗ?

ನವದೆಹಲಿ: ಮಹಾರಾಷ್ಟ್ರ ಹಾಗೂ ಜಾರ್ಖಂಡ್​ನಲ್ಲಿ ವಿಧಾನಸಭಾ ಕ್ಷೇತ್ರ ಮುಗಿದಿದ್ದು, ಚುನಾವಣೋತರ ಫಲಿತಾಂಶಗಳು (Exit Polls) ಹೊರಬಿದ್ದಿದೆ. ಮಹಾರಾಷ್ಟ್ರದ ವಿಚಾರಕ್ಕೆ ಬರುವುದಾದರೆ ಬಹುತೇಕ ಸಮೀಕ್ಷೆಗಳು ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಪರ ಒಲವನ್ನು ವ್ಯಕ್ತಪಡಿಸಿದ್ದು, ಜಾರ್ಖಂಡ್​ನಲ್ಲಿ ಬಿಜೆಪಿ ಹಾಗೂ ಜೆಎಂಎಂ ನಡುವೆ ನಿಖರ ಪೈಪೋಟಿ ಏರ್ಪಟ್ಟಿರುವುದಾಗಿ ವರದಿಗಳು ಉಲ್ಲೇಖಿಸಿವೆ.

ಮಹಾರಾಷ್ಟ್ರ ವಿಧಾನಸಭೆ

ಪೀಪಲ್ಸ್​ ಪಲ್ಸ್​​: ಮಹಾಯುತಿ 148-160 ಸ್ಥಾನ

ಮ್ಯಾಟ್ರಿಜ್: ಮಹಾಯುತಿ 150-170 ಸ್ಥಾನ 

ರಿಪಬ್ಲಿಕ್ (ಪಿ ಮಾರ್ಕ್): ಮಹಾಯುತಿ 137-157 ಸ್ಥಾನ 
ಚಾಣಕ್ಯ ಸ್ಟ್ರಾಟರ್ಜಿ:ಮಹಾಯುತಿ 150-160 ಸ್ಥಾನ
ಪೋಲ್ ಡೈರಿ:ಮಹಾಯುತಿ 122-186 ಸ್ಥಾನ

ದೈನಿಕ್ ಭಾಸ್ಕರ್: ಮಹಾ ವಿಕಾಸ್​ ಅಘಾಡಿ 135-150 ಸ್ಥಾನ

ಜಾರ್ಖಂಡ್​ ವಿಧಾನಸಭೆ 

ಪೀಪಲ್ಸ್​ ಪಲ್ಸ್​​: ಎನ್​ಡಿಎ 44-53

ಮ್ಯಾಟ್ರಿಜ್: ಎನ್​ಡಿಎ 42-47

ಚಾಣಕ್ಯ ಸ್ಟ್ರಾಟರ್ಜಿ: ಎನ್​ಡಿಎ 45-50 ಸ್ಥಾನ 

ಟೈಮ್ಸ್​ ನೌ: ಎನ್​ಡಿಎ 40-44 ಸ್ಥಾನ

ದೈನಿಕ್ ಭಾಸ್ಕರ್: ಎನ್​ಡಿಎ 37-40, ಇಂಡಿಯಾ ಮೈತ್ರಿಕೂಟ 36-39 ಸ್ಥಾನ 

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ಮಾಡಲಾಗಿದ್ದು, ನವೆಂಬರ್ 23 ರಂದು ಫಲಿತಾಂಶ ಹೊರಬೀಳಲಿದೆ. ಜಾರ್ಖಂಡ್​ ವಿಧಾನಸಭೆಗೆ ಎರಡು ಹಂತದಲ್ಲಿ ಮತದಾನ ನಡೆದಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.

https://www.vijayavani.net/gautam-gambhirs-tenure-could-be-shorter-than-greg-chappells-india-coach-sent-blunt-message-ahead-of-bgt

https://www.vijayavani.net/laxmi-hebbalkar-tells-that-tax-payers-will-note-get-gruhalakshmi-scheme-money