Lust: ತನ್ನ ಕಾಮ ಪೂರೈಸಿಕೊಳ್ಳಲು ಎಲ್ಲಾ ಮಿತಿಗಳನ್ನು ದಾಟಿದ ಇತ, ದೈಹಿಕ ಸಂಬಂಧ(ಲೈಂಗಿಕ ಕ್ರಿಯೆ) ಬೆಳಸದಿದ್ದರೆ ನನ್ನ ಮಗನನ್ನು ಮತ್ತು ನನ್ನನ್ನು ಕೊಲ್ಲುವುದಾಗಿ ನನ್ನ ಮಾಜಿ ಪತಿ ಬೆದರಿಕೆ ಹಾಕಿದ್ದಾನೆ ಎಂದು ಇತನ ವಿರುದ್ಧ ವಿಚ್ಛೇದನ ಪಡೆದ ಮಹಿಳೆ(ಮಾಜಿ ಪತ್ನಿ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಇನ್ನು ಈ ಅಘಾತಕಾರಿ ಘಟನೆ ಗುಜರಾತ್ನ ರಾಜ್ಕೋಟ್ನಲ್ಲಿ ಬೆಳಕಿಗೆ ಬಂದಿದೆ. ರಾಜ್ಕೋಟ್ ನಗರ ನಿವಾಸಿಯಾದ ಈ ಮಹಿಳೆ FIR ದಾಖಲಿಸಿದ್ದು, ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾಳೆ.
30 ವರ್ಷದ ಈ ಮಹಿಳೆ 2019ರಲ್ಲಿ ಆತನನ್ನು(ಹೆಸರು ಉಲ್ಲೇಖಿಸಿಲ್ಲ) ವಿವಾಹವಾಗಿದ್ದಾಳೆ. ಬಳಿಕ 2022ರಲ್ಲಿ ಇಬ್ಬರಿಗೆ ಗಂಡು ಮಗು ಜನಿಸಿದೆ. ಆದರೆ, ನಿಧಾನವಾಗಿ ಗಂಡ-ಹೆಂಡತಿ ನಡುವೆ ಸಣ್ಣ-ಸಣ್ಣ ಗಲಾಟೆಗಳಿಂದ ಇಬ್ಬರ ಸಂಸಾರಿಕ ಜೀವನದಲ್ಲಿ ಬಿರುಕು ಮೂಡಿದೆ. ಈ ಹಿನ್ನೆಲೆ 2024ರ ಡಿ.12ರಂದು ರಾಜ್ಕೋಟ್ನಲ್ಲಿ ಗಂಡನಿಂದ ವಿಚ್ಛೇದನ ಪಡೆದಿದ್ದಾಳೆ.
ಮೂರು ವರ್ಷದ ಮಗು ತನ್ನ ತಂದೆಯ ಹತ್ತಿರ ಇರುವ ಕಾರಣದಿಂದಾಗಿ ಮಗುವನ್ನು ನೋಡಿಕೊಳ್ಳಲು ವಿಚ್ಛೇದಿತ ಗಂಡ ಜತೆಗೆ ಲಿವ್-ಇನ್ ಸಂಬಂಧಕ್ಕೆ ಒಪ್ಪಿಕೊಂಡಿದ್ದಾಳೆ. ಲಿವ್-ಇನ್ ಸಂಬಂಧಕ್ಕೆ ಪ್ರವೇಶಿಸಿದ ನಂತರ, ಮಹಿಳೆಯ ಮಾಜಿ ಪತಿ, ನೀನು ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲದಿದ್ದರೆ, ನಿನ್ನ ಮಗನನ್ನು ಭೇಟಿಯಾಗಲು ನಾನು ಬಿಡುವುದಿಲ್ಲ. ಅಲ್ಲದೆ, ಇಬ್ಬರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈಗ ನಾನು ನಿಮಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದ್ದೇನೆ, ಆದ್ದರಿಂದ ನೀವು ಇನ್ನು ಮುಂದೆ ನನಗೆ ಯಾವುದೇ ಕೆಟ್ಟದ್ದನ್ನು ಮಾಡಲು ಸಾಧ್ಯವಿಲ್ಲ ಎಂದ ಮಹಿಳೆ, 2025ರ ಜ.23ರಂದು ಅತನಿಂದ ಲಿವ್-ಇನ್ ಸಂಬಂಧ ಕೊನೆಗೊಳಿದ್ದಾಳೆ. ಇಷ್ಟದರೂ ಅತ ದೈಹಿಕ ಸಂಭೋಗಕ್ಕೆ ನನ್ನ ಮಗನ ಮತ್ತು ನನ್ನ ವಿರುದ್ಧ ಇಲ್ಲದ ಸಲ್ಲದ ಆರೋಪ ಹಾಗೂ ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾಳೆ(ಏಜೆನ್ಸೀಸ್)