ಪಿಯುಸಿ ಟಾಪರ್​ ಆಗಿದ್ದ ಈ ನಟಿ IAS ಅಧಿಕಾರಿಯಾಗಲು ಬಯಸಿದ್ದರು..! ಯಾರೀ ಬ್ಯೂಟಿ?

dk - 2025-06-25T173233.052
Published on

ಬಾಲಿವುಡ್​ ಸೇರಿ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿರುವ ಈ ಬ್ಯೂಟಿ 12ನೇ ತರಗತಿ(ಪಿಯುಸಿ)ಯಲ್ಲಿ ಟಾಪರ್​​ ಆಗಿದ್ದಾಗ ಭಾರತೀಯ ಆಡಳಿತ ಸೇವೆ(IAS)ಗೆ ಸೇರಬೇಕು ಎಂದು ಬಯಸಿದ್ದರು.

IAS ಅಧಿಕಾರಿಯಾಗಬೇಕು ಎಂದು ಆಶಿಸಿದ್ದ ಇವರು ಇದೀಗ ಸಿನಿಮಾ ನಟಿಯಾಗಿದ್ದಾರೆ. ಇವರು ಬೇರೆ ಯಾರು ಅಲ್ಲ, ವಿಭಿನ್ನ ನಟನೇ ಮೂಲಕ ಅಭಿಮಾನಿಗಳ ಗಮನ ಸೆಳೆದ ಬ್ಯೂಟಿ ನಟಿ ರಾಶಿ ಖನ್ನಾ.

ಹೌದು, ಒಮ್ಮೆ ಸಂದರ್ಶನವೊಂದರಲ್ಲಿ, ಅವರು ಆರಂಭದಲ್ಲಿ ಗಾಯಕಿಯಾಗಬೇಕೆಂದು ಬಯಸಿದ್ದರು, ಆದರೆ ಕಾಲೇಜಿಗೆ ಸೇರಿದ ನಂತರ, ಐಎಎಸ್ ಅಧಿಕಾರಿಯಾಗುವ ಆಲೋಚನೆಯನ್ನು ಹೊಂದಿದ್ದರು ಎಂದು ಬಹಿರಂಗಪಡಿಸಿದ್ದರು.

ದೆಹಲಿ ಮೂಲದ ರಾಶಿ ಖನ್ನಾ, ರಾಷ್ಟ್ರ ರಾಜಧಾನಿಯಲ್ಲಿ ಶಿಕ್ಷಣ ಮುಗಿಸಿದ್ದಾರೆ. ಅಲ್ಲದೆ, ಅವರು ಇಂಗ್ಲಿಷ್​​ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ.

ಪದವಿ ಬಳಿಕ ಐಎಎಸ್‌ಗೆ ತಯಾರಿ ನಡೆಸುತ್ತಿರುವಾಗ ಜಾಹೀರಾತು ಏಜೆನ್ಸಿಯೊಂದರಲ್ಲಿ ಬರಹಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ರಾಶಿ ಖನ್ನಾ, ಜಾನ್ ಅಬ್ರಹಾಂ ನಟಿಸಿದ 'ಮದ್ರಾಸ್ ಕೆಫೆ' ಚಿತ್ರದಲ್ಲಿನ ಪಾತ್ರಕ್ಕಾಗಿ ಗಮನ ಸೆಳೆದರು. ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ರಾಶಿ ಖನ್ನಾ ತಾನು ನಟಿಯಾಗುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net