ನ್ಯೂಸ್

VIDEO| ಜೇಡವು ಪಕ್ಷಿ ತಿನ್ನುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ಮೈನವಿರೇಳಿಸೋ ವಿಡಿಯೋ!

ನವದೆಹಲಿ: ಪ್ರಕೃತಿಯು ವಿಷ್ಮಯಗಳ ಆಗರ ಎಂಬುದಕ್ಕೆ ಮತ್ತೊಂದು ಉದಾಹರಣೆಯಂತಿದೆ ಈ ವಿಡಿಯೋ. ಜೇಡ ಎಂದಾದರೂ ತನಗಿಂತಲೂ ಗಾತ್ರದಲ್ಲಿ ದೊಡ್ಡದಾದ ಪಕ್ಷಿ ತಿನ್ನುವುದನ್ನು ನೀವು ನೋಡಿದ್ದೀರಾ? ಇಲ್ಲವಾದಲ್ಲಿ ಈ ರೋಮಾಂಚನಕಾರಿ ವಿಡಿಯೋ ನೋಡುವುದನ್ನು ಮರೆಯಲೇ ಬೇಡಿ.

ನೇಚರ್​ ಇಸ್​ ಸ್ಕ್ಯಾರಿ ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಅಪ್​ಲೋಡ ಮಾಡಲಾಗಿದ್ದು, ಅವಿಕುಲೇರಿಯಾ ಹೆಸರಿನ ಜೇಡವು ಪಕ್ಷಿಯನ್ನು ತಿನ್ನುತ್ತಿದೆ ಎಂದು ಅಡಿಬರಹ ಬರೆಯಲಾಗಿದೆ.

ಮೈನವಿರೇಳಿಸುವ 54 ಸೆಕೆಂಡಿನ ವಿಡಿಯೋದಲ್ಲಿ ದೊಡ್ಡ ಗಾತ್ರದ ಜೇಡವೊಂದು ನಿಯಮಿತ ಗಾತ್ರದ ಪಕ್ಷಿಯನ್ನು ನಿಧಾನವಾಗಿ ತಿನ್ನುತ್ತಿದೆ. ಸದ್ಯ ವಿಡಿಯೋ ವೈರಲ್​ ಆಗಿದ್ದು, ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ನಾವೆಂದಿಗೂ ಈ ಇಂತಹ ವಿಡಿಯೋ ನೋಡಿಯೇ ಇಲ್ಲವೆಂದು ಅನೇಕ ನೆಟ್ಟಿಗರು ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್​)