ಇತ್ತೀಚೆಗೆ ಕೋತಿಗಳು ಸ್ವಿಮ್ಮಿಂಗ್ ಫೂಲ್ನಲ್ಲಿ ಸ್ವಚ್ಛಂದವಾಗಿ ಈಜುತ್ತಿದ್ದ ವಿಡಿಯೋವೊಂದು ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿತ್ತು. ಈಗ ಅಂಥದ್ದೇ ಒಂದು ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಇದು ಕೂಡ ಕೋತಿಗೆ ಸಂಬಂಧಪಟ್ಟದ್ದೇ.
ಲಾಕ್ಡೌನ್ ಇರುವುದರಿಂದ ಮನುಷ್ಯರೆಲ್ಲ ಮನೆಯಲ್ಲಿಯೇ ಇದ್ದಾರೆ. ಹಾಗಾಗಿ ಮಂಗಗಳು ಸೇರಿ ಹಲವು ಪ್ರಾಣಿಗಳು ನಗರದಲ್ಲಿ ಆರಾಮವಾಗಿ ಓಡಾಡಿಕೊಂಡು, ಕೀಟಲೆ ಮಾಡಿಕೊಂಡು ಇವೆ.
ಆದರೆ ಇಲ್ಲೊಂದು ಕೋತಿ ಗಾಳಿಪಟ ಹಾರಿಸಿದೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಅವರು ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಟೆರೇಸ್ ಮೇಲೆ ಕುಳಿತ ಕೋತಿಯೊಂದು ಪಕ್ಕಾ ಮನುಷ್ಯರಂತೆಯೇ ಗಾಳಿಪಟ ಹಾರಿಸಿ ಆಟವಾಡುವುದನ್ನು 12 ಸೆಕೆಂಡ್ಗಳ ವಿಡಿಯೋದಲ್ಲಿ ನೋಡಬಹುದು.
ವಿಡಿಯೋ ಶೇರ್ ಮಾಡಿದ ಐಎಫ್ಎಸ್ ಅಧಿಕಾರಿ, ಲಾಕ್ಡೌನ್ ಎಂಬುದು ಅನೇಕ ವಿಕಾಸಗಳಿಗೆ ಕಾರಣವಾಗುತ್ತಿದೆ. ಮಂಗ ಗಾಳಿಪಟ ಹಾರಿಸುತ್ತಿದೆ. ಹೌದು..ನಿಜಕ್ಕೂ ಅದು ಕೋತಿಯೇ ಹೌದು..ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಶೇರ್ ಆದ ಐದೇ ತಾಸಿನಲ್ಲಿ 10,000ಕ್ಕೂ ಅಧಿಕ ವೀವ್ಸ್ಗಳನ್ನು ಪಡೆದುಕೊಂಡಿರುವ ವಿಡಿಯೋಕ್ಕೆ ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ.
ನೆಟ್ಟಿಗರಂತೂ ಫುಲ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಗೆಬಗೆಯ ಕಾಮೆಂಟ್ಗಳನ್ನು ಹಾಕಿದ್ದಾರೆ. ಇದೊಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಸನ್ನಿವೇಶ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)