ನ್ಯೂಸ್

ನನ್ನ ಕತ್ತು ಸೀಳಿದರೂ.. ಶ್ವಾಸನಾಳ ಕೂಡ ''ಮಮತಾ ಬ್ಯಾನರ್ಜಿ ಜಿಂದಾಬಾಂದ್​'' ಎನ್ನುತ್ತೆ; ವದಂತಿಗಳ ವಿರುದ್ಧ ಕಿಡಿಕಾರಿದ ಅಭಿಷೇಕ್​ ಬ್ಯಾನರ್ಜಿ | Rumours

Rumours: ನಾನು ದೇಶದ್ರೋಹಿ ಅಲ್ಲ.. ನಾನು ಬಿಜೆಪಿಗೆ ಸೇರುತ್ತೇನೆ ಎಂದು ಹೇಳುವರು ನನ್ನ ಕತ್ತು ಸೀಳಿದರೂ, ಕತ್ತರಿಸಿದ ಶ್ವಾಸನಾಳದಿಂದ ''ಮಮತಾ ಬ್ಯಾನರ್ಜಿ ಜಿಂದಾಬಾಂದ್​'' ಎಂದು ಘೊಷಣೆ ಕೂಗುತ್ತಲೇ ಇರುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ, ಬಲಗೈಬಂಟ, ಸಂಸದ ಅಭಿಷೇಕ್​ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ.

ತೃಣಮೂಲ ಕಾಂಗ್ರೆಸ್ ಗುರುವಾರ​ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಬಿಜೆಪಿಗೆ ಹೋಗುತ್ತಾರೆ ಎಂಬ ವದಂತಿಗಳನ್ನು ವಿರುದ್ಧ ಹರಿಹಾಯ್ದರು. '' ಇಂತಹ ನಕಲಿ ಸುದ್ದಿಗಳು ಯಾರು ಹರಡುತ್ತಿದ್ದಾರೆ ನನಗೆ ತಿಳಿದಿದೆ ಎಂದ ಅಭಿಷೇಕ್​, ತೃಣಮೂಲದ ಕಾಂಗ್ರೆಸ್​ ಮಾಜಿ ನಾಯಕರಾದ ಮುಕುಲ್​ ರಾಯ್​ ಮತ್ತು ಸುವೇಂದು ಅಧಿಕಾರಿ'' ಎಂದು ಆರೋಪಿಸಿದರು.

ಮುಂದಿನ 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಅವರು ಸ್ವಾರ್ಥ ಹಿತಾಸಕ್ತಿಯನ್ನು ಹೊಂದಿದ್ದಾರೆ. ಅವರು ದೇಶದ್ರೋಹಿಗಳು ಎಂದರು. ಶಿಕ್ಷಕರ ನೇಮಕಾತಿ ಹಗರಣದ ತನಿಖೆಯಲ್ಲಿ ಹೊಸ ಚಾರ್ಜ್‌ಶೀಟ್ ಸಲ್ಲಿಸಿದ್ದಕ್ಕಾಗಿಯೂ ಅಭಿಷೇಕ್​ ಬ್ಯಾನರ್ಜಿ ಸಿಬಿಐ ವಿರುದ್ಧ ಹರಿಹಾಯ್ದರು.(ಏಜೆನ್ಸೀಸ್​)