Manoj Jarange: ಮರಾಠರಿಗೆ ಒಬಿಸಿ ಕೋಟಾದಟಿ ಮೀಸಲಾತಿ ನೀಡುವಂತೆ ಪ್ರತಿಭಟನೆ ಮಾಡುತ್ತಿರುವ ಮರಾಠಾ ಕಾರ್ಯಕರ್ತ ಮನೋಜ್ ಜರಂಗೇ ಪಾಟೀಲ್, ನಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸುವವರೆಗೆ, ತಮ್ಮ ಪ್ರಾಣವನ್ನೇ ಬಲಿ ತೆಗೆದುಕೊಂಡರೂ ಸಹ, ನಾನು ಮತ್ತು ನನ್ನ ಬೆಂಬಲಿಗರು ಮುಂಬೈ ತೊರೆಯುವುದಿಲ್ಲ ಎಂದು ಮಂಗಳವಾರ (ಸೆಪ್ಟೆಂಬರ್,02) ಘೋಷಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರಕ್ಕೆ, ವಿಶೇಷವಾಗಿ ಸಿಎಂ ದೇವೇಂದ್ರ ಫಡ್ನವೀಸ್‌ಗೆ ತೀಕ್ಷ್ಣ ಎಚ್ಚರಿಕೆ ನೀಡಿದ ಜರಂಗೇ, ಮಹಾರಾಷ್ಟ್ರದಾದ್ಯಂತ ಮರಾಠಾ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ಪೊಲೀಸ್ರನ್ನು ವಜಾಗೊಳಿಸುವುದರ ಜೊತೆಗೆ ಪೋಲೀಸರ ವಿರುದ್ಧ ಪ್ರಕರಣಗಳನ್ನು ದಾಖಲಿಸಬೇಕೆಂದು ಜರಂಗೇ ಆಗ್ರಹಿಸಿದ್ದಾರೆ.
ಮುಂದುವರೆದು ಮಾತನಾಡಿದ ಜರಂಗೆ, ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರುವವರೆಗೆ ನಾವು ಮುಂಬೈ ಬಿಟ್ಟು ಹೋಗುವುದಿಲ್ಲ ಎಂದು ನಾನು ಸರ್ಕಾರ ಮತ್ತು ಫಡ್ನವೀಸ್‌ಗೆ ಹೇಳುತ್ತೇನೆ.ಅಲ್ಲದೆ, ನಮ್ಮ ಮೇಲೆ ದಾಳಿ ಮಾಡಿದ ಪೊಲೀಸರನ್ನು ವಜಾಗೊಳಿಸಿ ಮತ್ತು ಪ್ರಕರಣಗಳನ್ನು ದಾಖಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ಹುಡುಗರ ವಿರುದ್ಧ ಪೊಲೀಸರನ್ನು ಲಾಠಿ ಚಾರ್ಜ್‌ಗೆ ಬಳಸುವ ಬಗ್ಗೆ ದೇವೇಂದ್ರ ಫಡ್ನವೀಸ್ ಯೋಚಿಸಬಾರದು. ಅಲ್ಲದೆ, ಮರಾಠರು ಏನೆಂದು ನಾವು ಫಡ್ನವೀಸ್‌ಗೆ ತೋರಿಸುತ್ತೇವೆ. ಪ್ರತಿಭಟನಾ ಅನುಮತಿಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಪೊಲೀಸರು ಮತ್ತು ಕೋರ್ ಸಮಿತಿಗೆ ನೋಟಿಸ್ ನೀಡಿದ ಕೆಲವೇ ಗಂಟೆಗಳ ನಂತರ ಜರಂಗೆ ಧಿಕ್ಕಾರ ಮಾತುಗಳನ್ನು ಆಡಿದ್ದಾರೆ.
ಜರಂಗೇ ಮತ್ತು ಬೆಂಬಲಿಗರು ಆಜಾದ್ ಮೈದಾನವನ್ನು ತಕ್ಷಣವೇ ಸ್ಥಳದಿಂದ ತೆರವುಗೊಳಿಸುವಂತೆ ಪೊಲೀಸರು ತಮ್ಮ ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ಜರಂಗೇ ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆಗಳನ್ನು ಮಾಧ್ಯಮಗಳಿಗೆ ಉಲ್ಲಂಘನೆಯ ಭಾಗವೆಂದು ಪೋಲೀಸರು ಆರೋಪಿಸಿದ್ದಾರೆ.
ಸೋಮವಾರ ಬಾಂಬೆ ಹೈಕೋರ್ಟ್ ನೀಡಿದ ಕಠಿಣ ಆದೇಶದ ಮೇರೆಗೆ ಪೊಲೀಸ್ ಕ್ರಮ ಕೈಗೊಂಡಿದ್ದಾರೆ. ಪ್ರತಿಭಟನೆ ನಡೆಸುವ ಹಕ್ಕು ಮೂಲಭೂತ ಹಕ್ಕು ಆಗಿದ್ದರೂ, ಪ್ರತಿಭಟನೆಯು ಅನುಮತಿಸಲಾದ ಮಿತಿಗಳನ್ನು ಮೀರಿದೆ ಮತ್ತು ಮುಂಬೈ ನಗರವನ್ನು, ವಿಶೇಷವಾಗಿ ಗಣೇಶೋತ್ಸವದ ಸಂದರ್ಭವನ್ನು ನಿಷ್ಕ್ರಿಯಗೊಳಿಸಿದೆ ಎಂದು ನ್ಯಾಯಾಲಯ ತಿಳಿಸಿದೆ.(ಏಜೆನ್ಸೀಸ್)