ನವದೆಹಲಿ: ವಂದೇ ಮಾತರಂ(Vande Mataram) ಗೀತೆ ದೇಶವಾಸಿಗಳ ಹೃದಯಗಳಲ್ಲಿ ರಾಷ್ಟ್ರೀಯತೆಯ ಶಾಶ್ವತ ಜ್ವಾಲೆಯನ್ನು ಹೊತ್ತಿಸುತ್ತಲೇ ಇದೆ ಮತ್ತು ಇಂದಿಗೂ ಯುವಜನರಲ್ಲಿ ಏಕತೆ, ದೇಶಭಕ್ತಿಯ ಮೂಲವಾಗಿ ಉಳಿದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಕ್ರವಾರ (ನ.7) ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಷಾ, 2025ರ ನವೆಂಬರ್ 7, ರಿಂದ 2026ರ ನವೆಂಬರ್ 7, ರವರೆಗೆ ನಡೆಯುವ ಭಾರತದ ರಾಷ್ಟ್ರೀಯ ಗೀತೆ ವಂದೇ ಮಾತರಂ ರಚನೆಯ 150 ನೇ ವಾರ್ಷಿಕೋತ್ಸವದ ವರ್ಷಾಚರಣೆ ನೆಡೆಯಲಿದೆ. ವಂದೇ ಮಾತರಂ ಕೇವಲ ಪದಗಳ ಸಂಗ್ರಹವಲ್ಲ, ಅದು ಭಾರತದ ಆತ್ಮದ ಧ್ವನಿಯಾಗಿದೆ ಎಂದಿದ್ದಾರೆ. ಬ್ರಿಟೀಷ್ ಆಡಳಿತದ ವಿರುದ್ಧ, ವಂದೇ ಮಾತರಂ ರಾಷ್ಟ್ರವನ್ನು ಒಂದುಗೂಡಿಸಿತು ಮತ್ತು ಸ್ವಾತಂತ್ರ್ಯದ ಪ್ರಜ್ಞೆಯನ್ನು ಬಲಪಡಿಸಿತು. ಇದೇ ಸಮಯದಲ್ಲಿ, ಇದು ಕ್ರಾಂತಿಕಾರಿಗಳಲ್ಲಿ ಮಾತೃಭೂಮಿಗಾಗಿ ಅಚಲವಾದ ಸಮರ್ಪಣೆ, ಹೆಮ್ಮೆ ಮತ್ತು ತ್ಯಾಗದ ಮನೋಭಾವವನ್ನು ಜಾಗೃತಗೊಳಿಸಿತು ಎಂದು ಷಾ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಷಾ, ಇದು ದೇಶವಾಸಿಗಳ ಹೃದಯಗಳಲ್ಲಿ ರಾಷ್ಟ್ರೀಯತೆಯ ಶಾಶ್ವತ ಜ್ವಾಲೆಯನ್ನು ಹೊತ್ತಿಸುತ್ತಲೇ ಇದೆ ಮತ್ತು ಇಂದಿಗೂ ಯುವಜನರಲ್ಲಿ ಏಕತೆ, ದೇಶಭಕ್ತಿಯ ಮೂಲವಾಗಿ ಉಳಿದಿದೆ ಎಂದು ಷಾ ಹೇಳಿದ್ದಾರೆ.
ಇದನ್ನೂ ಓದಿ: ‘ವಂದೇ ಮಾತರಂ’ ಗೀತೆಗೆ 150 ವರ್ಷ: ಸ್ಟ್ಯಾಂಪ್, ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ | Vande Mataram
ಮುಂದುವರೆದು ಮಾತನಾಡಿದ ಷಾ, ನಮ್ಮ ರಾಷ್ಟ್ರೀಯ ಗೀತೆಗೆ ಈ ವರ್ಷ 150 ವರ್ಷ ತುಂಬುತ್ತಿದೆ. ದೇಶದ ಎಲ್ಲ ನಾಗರಿಕರು ಈ ಗೀತೆಯ ಪೂರ್ಣ ಆವೃತ್ತಿಯನ್ನು ಕುಟುಂಬ ಸದಸ್ಯರೊಂದಿಗೆ ಸಾಮೂಹಿಕವಾಗಿ ಹಾಡುವ ಮೂಲಕ ಸ್ಮರಿಸಬೇಕು. ಇದರಿಂದ ಅದು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಕೇಂದ್ರವಾಗಿ ಉಳಿಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಬಂಕಿಮ ಚಂದ್ರ ಚಟರ್ಜಿ ರಚಿಸಿದ 'ವಂದೇ ಮಾತರಂ' 1875 ರ ನವೆಂಬರ್ 7 ರಂದು ಮೊದಲು ಸಾಹಿತ್ಯ ಪತ್ರಿಕೆ ಬಂಗದರ್ಶನ್ನಲ್ಲಿ ಪ್ರಕಟವಾಯಿತು. ನಂತರ, ಬಂಕಿಮ್ ಚಂದ್ರ ಚಟರ್ಜಿ ಅವರು 1882 ರಲ್ಲಿ ಪ್ರಕಟವಾದ ತಮ್ಮ ಅಮರ ಕಾದಂಬರಿ ಆನಂದಮಠದಲ್ಲಿ ಈ ಗೀತೆಯನ್ನು ಸೇರಿಸಿದರು. ಇದನ್ನು ರವೀಂದ್ರನಾಥ ಟ್ಯಾಗೋರ್ ಸಂಗೀತ ಸಂಯೋಜಿಸಿದ್ದಾರೆ. ಇದು ದೇಶದ ನಾಗರಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.(ಏಜೆನ್ಸೀಸ್)