ನ್ಯೂಸ್

ಬ್ಯಾಗ್ ಮೇಲೆ 'ಶ್ರೀರಾಮ್​' ಚಿಹ್ನೆ; ತಾಜ್ ಮಹಲ್‌ನೊಳಗೆ ಪ್ರವೇಶ ನಿರಾಕರಣೆ: ಪ್ರವಾಸಿಗ ಆರೋಪ | Taj Mahal

Taj Mahal: ಆಗ್ರಾದ ಐತಿಹಾಸಿಕ ತಾಜ್ ಮಹಲ್‌ನೊಳಗೆ ಹಿಂದು ಧಾರ್ಮಿಕ ಚಿನ್ನೆ ಹೊಂದಿರುವ ಚೀಲ ಇದ್ದ ಹಿನ್ನೆಲೆ ಪ್ರವೇಶದ್ವಾರ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ ಎಂದು ಉತ್ತರ ಪ್ರದೇಶದ ಕಾನ್ಪುರದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.

ಆಶಿಶ್ ಎಂದು ಗುರುತಿಸಿಕೊಂಡಿರುವ ಪ್ರವಾಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿ, ಪ್ರವೇಶ ಟಿಕೆಟ್ ಹೊಂದಿದ್ದರೂ ತನ್ನ ಬ್ಯಾಗ್ ಅನ್ನು ಭದ್ರತಾ ಸ್ಕ್ಯಾನರ್‌ನಲ್ಲಿ ಇಟ್ಟ ನಂತರ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.

ಬ್ಯಾಗ್ ಮೇಲೆ ಶ್ರೀರಾಮ್​ ಚಿಹ್ನೆ

ತನ್ನ ಬ್ಯಾಗ್ ಮೇಲೆ 'ಶ್ರೀ ರಾಮ' ಎಂದು ಮುದ್ರಿಸಲಾಗಿರುವುದರಿಂದ ಭದ್ರತಾ ಸಿಬ್ಬಂದಿ ಮುಂದೆ ಸಾಗಲು ಅವಕಾಶ ನೀಡಲಿಲ್ಲ ಎಂದು ಪ್ರವಾಸಿಗ ಹೇಳಿಕೊಂಡಿದ್ದಾರೆ. ಆದಾಗ್ಯೂ, ಸ್ಕ್ಯಾನ್‌ಗಳಲ್ಲಿ ಸಂದರ್ಶಕನು ತನ್ನ ಬ್ಯಾಗ್‌ನಲ್ಲಿ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿರುವುದು ಕಂಡುಬಂದ ಕಾರಣ ಪ್ರವೇಶದ್ವಾರದಲ್ಲಿ ಅವನನ್ನು ನಿಲ್ಲಿಸಲಾಯಿತು ಎಂದು ತಾಜ್ ಮಹಲ್‌ನ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಹಿರಿಯ ಕಮಾಂಡೆಂಟ್ ವೈಭವ್ ದುಬೆ, ಸ್ಕ್ಯಾನಿಂಗ್ ಸಮಯದಲ್ಲಿ ಬ್ಯಾಗ್ ಒಳಗೆ ಸುಪಾರಿ, ತಂಬಾಕು ಮತ್ತು ಕಟ್ಟರ್ ಸೇರಿದಂತೆ ನಿಷೇಧಿತ ವಸ್ತುಗಳು ಕಂಡುಬಂದಿವೆ ಎಂದು ಹೇಳಿದರು. ಸ್ಮಾರಕ ಆವರಣದೊಳಗೆ ಇವುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್​)