ನ್ಯೂಸ್

'ಅನಿಮಲ್‌'ನಲ್ಲಿ ಬೆತ್ತಲೆ ದೃಶ್ಯ ನೋಡಿ ಅಪ್ಪ, ಅಮ್ಮ ಏನಂದ್ರು ಅಂದ್ರೆ… ಪೋಷಕರ ರಿಯಾಕ್ಷನ್ ವಿವರಿಸಿದ ತೃಪ್ತಿ ದಿಮ್ರಿ

ಮುಂಬೈ: ನಟಿ ತೃಪ್ತಿ ದಿಮ್ರಿ 'ಅನಿಮಲ್' ಚಿತ್ರದ ಮೂಲಕ ಸಿನಿ ಪ್ರಿಯರ ಗಮನ ಸೆಳೆದರು. ಚಿತ್ರದಲ್ಲಿ ತೃಪ್ತಿ ನಟ ರಣಬೀರ್ ಕಪೂರ್ ಜೊತೆ ಹಲವು ಇಂಟಿಮೇಟ್ ದೃಶ್ಯಗಳನ್ನು ಮಾಡಿದ್ದಾರೆ. ಅಂದಿನಿಂದ ಆಕೆಯ ಬೋಲ್ಡ್ ದೃಶ್ಯಗಳು ಎಲ್ಲರ ಹುಬ್ಬೇರುವಂತೆ ಮಾಡಿವೆ. ಅಂದಹಾಗೆ ಅನಿಮಲ್ ಚಿತ್ರದ ನಂತರ ತೃಪ್ತಿ ಅವರ ಫ್ಯಾನ್ ಫಾಲೋಯಿಂಗ್ ಬಹಳಷ್ಟು ಹೆಚ್ಚಾಗಿದೆ. ಸದ್ಯ ನಟಿಯ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದಾರೆ.

ಇದೀಗ ಸಂದರ್ಶನವೊಂದರಲ್ಲಿ, ತೃಪ್ತಿ ಈ ಇಂಟಿಮೇಟ್ ದೃಶ್ಯಗಳನ್ನು ನೋಡಿದ ನಂತರ ಪೋಷಕರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ತೃಪ್ತಿ, 'ನನ್ನ ಹೆತ್ತವರು ಸ್ವಲ್ಪ ಆಶ್ಚರ್ಯಪಟ್ಟರು'. ಇಂಟಿಮೇಟ್ ದೃಶ್ಯವನ್ನು ನೋಡಿದ ಅವರು, 'ನಾವು ಯಾವತ್ತೂ ಸಿನಿಮಾಗಳಲ್ಲಿ ಈ ರೀತಿ ದೃಶ್ಯ ನೋಡಿಲ್ಲ. ಆದರೆ ನೀವು ಹೀಗೆ ಮಾಡಿದ್ದೀರಿ' ಎಂದು ಹೇಳಿದರು. 'ಆ ದೃಶ್ಯವನ್ನು ನೋಡಿದ ನಂತರ ಅವರಿಗೆ ಅರಗಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು' ಎಂದು ತಿಳಿಸಿದ್ದಾರೆ.

'ನೀನು ಹಾಗೆ ಮಾಡಬಾರದಿತ್ತು...'

ಅಷ್ಟೇ ಅಲ್ಲ ತೃಪ್ತಿ, 'ನೀನು ಹಾಗೆ ಮಾಡಬಾರದಿತ್ತು, ಆದರೆ ಪರವಾಗಿಲ್ಲ, ಪೋಷಕರಾಗಿ ನಾವಿದನ್ನು ಅರ್ಥ ಮಾಡಿಕೊಳ್ಳುತ್ತೇವೆ' ಎಂದು ಪ್ರತಿಕ್ರಿಯಿಸಿದ್ದರು. ಆದರೆ ಹೆತ್ತವರಿಗೆ ಹೀಗೆ ಅನಿಸುವುದು, ನಾನು ಯಾವುದೇ ತಪ್ಪು ಮಾಡುತ್ತಿಲ್ಲ ಎಂದು ಅವರಿಗೆ ಹೇಳಿದೆ. ಇದು ನನ್ನ ಕೆಲಸ ಮತ್ತು ಎಲ್ಲಿಯವರೆಗೆ ನಾನು ಸುರಕ್ಷಿತವಾಗಿರುತ್ತೇನೆಯೋ ಅಲ್ಲಿಯವರೆಗೆ ನನಗೆ ಇದರಲ್ಲಿ ಯಾವುದೇ ತೊಂದರೆ ಕಾಣಿಸುವುದಿಲ್ಲ. ನಾನೊಬ್ಬ ನಟಿ ಮತ್ತು ನಾನು ಮಾಡುವ ಪಾತ್ರಕ್ಕೆ ಪ್ರಾಮಾಣಿಕವಾಗಿರಬೇಕು ಮತ್ತು ನಾನು ಅದೇ ರೀತಿ ಮಾಡಿದ್ದೇನೆ' ಎಂದರು.

ಈ ದೃಶ್ಯದ ಚಿತ್ರೀಕರಣದ ಬಗ್ಗೆಯೂ ತೃಪ್ತಿ ಈ ಹಿಂದೆ ಮುಕ್ತವಾಗಿ ಮಾತನಾಡಿದ್ದರು. ಶೂಟಿಂಗ್ ಇದ್ದ ದಿನ ಕೇವಲ ಐದು ಮಂದಿಗೆ ಮಾತ್ರ ಸೆಟ್‌ಗೆ ಅವಕಾಶ ನೀಡಲಾಗಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ. ಆ ದೃಶ್ಯದ ಚಿತ್ರೀಕರಣದ ವೇಳೆ ರಣಬೀರ್ ನಾನು ಆರಾಮಾಗಿದ್ದೇನೋ ಇಲ್ಲವೋ ಎಂದು ನಿರಂತರವಾಗಿ ತನ್ನ ಮೇಲೆ ನಿಗಾ ಇಡುತ್ತಿದ್ದರು ಎಂದು ಹೇಳಿದ್ದಾರೆ.

ಸೆಟ್‌ನಲ್ಲಿ ಬೇರೆಯವರಿಗೆ ಅವಕಾಶ ನೀಡಲಿಲ್ಲ, ಎಲ್ಲಾ ಮಾನಿಟರ್‌ಗಳು ಆಫ್ ಆಗಿದ್ದವು. 'ಇದು ನಾವು ಮಾಡುತ್ತಿರುವ ದೃಶ್ಯ. ಯಾವುದೇ ಸಮಯದಲ್ಲಿ ನೀವು ಗೊಂದಲಕ್ಕೊಳಗಾಗಿದ್ದೀರಿ' ಎಂದು ನೀವು ಭಾವಿಸಿದರೆ ನಮಗೆ ತಿಳಿಸಿ. 'ನಾವು ನಿಮ್ಮ ಸೂಚನೆಗಳನ್ನು ಅನುಸರಿಸುತ್ತೇವೆ' ಎಂದು ಪ್ರತಿ ಐದು ನಿಮಿಷಕ್ಕೊಮ್ಮೆ ರಣಬೀರ್ ಕಪೂರ್ ನನ್ನನ್ನು ಪರೀಕ್ಷಿಸಿ, 'ನೀವು ಚೆನ್ನಾಗಿದ್ದೀರಾ?' ಎಂದು ಕೇಳುತ್ತಿದ್ದರು ಎಂದು ತಿಳಿಸಿದ್ದಾರೆ ತೃಪ್ತಿ.