ನವದೆಹಲಿ: ಸಾಮಾನ್ಯವಾಗಿ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಮಾಜಿ ಪ್ರೇಮಿಯ ವಿವಾಹದಲ್ಲಿ ಗೇಟ್ ಕ್ರ್ಯಾಶ್ ಮಾಡುವ ಜನರನ್ನು ನೋಡಿದ್ದೇವೆ. ಜೀವನದ ಸಂದರ್ಭಗಳು ಮಾಜಿ ಪ್ರೇಮಿಗಳು ತಮ್ಮ ಹಿಂದಿನ ಸಂಗಾತಿಯ ಮದುವೆಯ ದಿನದಂದು ತಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುವುದನ್ನು ಅಥವಾ ಅದನ್ನು ನಿಲ್ಲಿಸಲು ಪ್ರಯತ್ನಿಸುವುದನ್ನು ಸಿನಿಮಾದಲ್ಲಿ ಕಾಣಬಹುದು. ಆದರೆ, ಇತ್ತೀಚೆಗೆ ರಾಜಸ್ಥಾನದ ವ್ಯಕ್ತಿಯೊಬ್ಬರು ತಮ್ಮ ಮಾಜಿ ಗೆಳತಿಯ ಮದುವೆಯನ್ನು ಗೇಟ್‌ಕ್ರ್ಯಾಶ್ ಮಾಡಿ, ವೇದಿಕೆಯ ಮೇಲೆ ವರನಿಗೆ ಗುದ್ದಿದ್ದಾರೆ. ಆಗ ಬಿಡಿಸಲು ವಧು ಮಧ್ಯಪ್ರವೇಶಿಸಿದ್ದಾಳೆ.
ಘರ್ ಕೆ ಕಾಲೇಶ್ ಎಂಬ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಹಂಚಿಕೊಂಡಿರುವ ವಿಡಿಯೋ ಇದಾಗಿದೆ. ಈ ಮದುವೆಯಲ್ಲಿ ಸಿನಿಮಾ ಶೈಲಿಯ ಟ್ವಿಸ್ಟ್ ಸೆರೆಹಿಡಿದಿದೆ. ರಾಜಸ್ತಾನದ ಭಿಲ್ವಾರ್ನಲ್ಲಿ ಈ ಘಟನೆ ನಡೆದಿದೆ. ಆದರೆ, ಈ ಘಟನೆ ನಡೆದಿದ್ದು ಯಾವಾಗ ಎಂಬ ವಿವರಗಳಿಲ್ಲ.
ನವವಿವಾಹಿತ ಜೋಡಿಯೊಂದಿಗೆ ಫೋಟೋ ಶೂಟ್ ಮಾಡಲು ವ್ಯಕ್ತಿಯೊಬ್ಬ ವೇದಿಕೆಯ ಮೇಲೆ ಹೆಜ್ಜೆ ಹಾಕಿದ. ನಂತರ ಆ ವ್ಯಕ್ತಿ ವರನಿಗೆ ಗುದ್ದಲು ಪ್ರಾರಂಭಿಸಿದಾಗ, ಎಲ್ಲರೂ ಆಘಾತಕ್ಕೊಳಗಾಗಿದ್ದರು. ವರನಿಗೆ ಹೊಡೆದ ಈ ವ್ಯಕ್ತಿ ವಧುವಿನ ಮಾಜಿ ಬಾಯ್ಫ್ರೆಂಡ್ ಆಗಿದ್ದ ಎನ್ನಲಾಗಿದೆ.
ಈ ಅನಿರೀಕ್ಷಿತ ಸನ್ನಿವೇಶವು ತೆರೆದುಕೊಳ್ಳುತ್ತಿದ್ದಂತೆ, ವಧುವಿನ ಮಾಜಿ ಗೆಳೆಯನಿಂದ ವರನನ್ನು ರಕ್ಷಿಸಲು ವಧು ಹಲವಾರು ಅತಿಥಿಗಳೊಂದಿಗೆ ತಕ್ಷಣವೇ ಮಧ್ಯಪ್ರವೇಶಿಸಿದಳು.
ಕಬೀರ್ ಸಿಂಗ್ ಕಿಂಡಾ ಕಾಲೇಶ್ ಮಾಜಿ ಗೆಳೆಯ ಮತ್ತು ವೇದಿಕಯಲ್ಲಿನ ವರ (ಮಾಜಿ ಬಾಯ್ಫ್ರೆಂಡ್ ಮತ್ತು ವಧು ಒಂದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು), ಭಿಲ್ವಾರಾ ಆರ್ಜೆ. ಎಂದು ವಿಡಿಯೋ ಶೀರ್ಷಿಕೆ ಹೇಳುತ್ತದೆ.
ಈ ವಿಡಿಯೋ ವೈರಲ್ ಆದ ಮೇಲೆ ಇಂಟರ್ನೆಟ್ ಬಳಕೆದಾರರ ಆಸಕ್ತಿ ಕೆರಳಿಸಿದೆ. ಹಲವಾರು ಜನರು ವೀಡಿಯೊಗೆ ಪ್ರತಿಕ್ರಿಯಿಸಿದರು, ಕೆಲವರು ವರನನ್ನು ಹೊಡೆದಿದ್ದಕ್ಕಾಗಿ ಈ ವ್ಯಕ್ತಿಯನ್ನು 'ಹೇಡಿ' ಎಂದು ಡಬ್ ಮಾಡಿದ್ದಾರೆ. “ನಿಮ್ಮ ಸ್ವಂತ ವೈಫಲ್ಯದಿಂದಾಗಿ ನೀವು ಹುಡುಗಿಯನ್ನು ಪಡೆಯಲು ಸಾಧ್ಯವಾಗದಿದ್ದಾಗ, ನಿಮ್ಮ ಕೋಪವನ್ನು ನೀವು ಹೀಗೆ ಹೊರಹಾಕುತ್ತೀರಿ. ಹೇಡಿ ಮನುಷ್ಯ,” ಎಂದು ಒಬ್ಬರು ಟೀಕಿಸಿದ್ದಾರೆ. ಮತ್ತೊಬ್ಬರು,"ಕ್ರೈಂ ಪ್ಯಾಟ್ರೋಲ್ ಎಪಿಸೋಡ್. ಕ್ರಿಮಿನಲ್ ಮತ್ತು ಮಾಸ್ಟರ್ ಮೈಂಡ್ ವಧು ಆಗಿರುತ್ತಾರೆ" ಎಂದಿದ್ದಾರೆ. ಮಗದೊಬ್ಬ ಬಳಕೆದಾರ "ಈಗ ಇದನ್ನು ಮಾಡುವುದರ ಅರ್ಥವೇನು?" ಎಂದು ಪ್ರಶ್ನಿಸಿದ್ದಾರೆ.
ಮೊನ್ನೆಯಷ್ಟೇ ಇದೇ ರೀತಿಯ ಘಟನೆ ಮುನ್ನೆಲೆಗೆ ಬಂದಿತ್ತು. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯ ಮದುವೆಯನ್ನು ಗೇಟ್‌ಕ್ರಾಶ್ ಮಾಡಿದ್ದಲ್ಲದೆ, ಮದುವೆಯನ್ನು ನಿಲ್ಲಿಸಲು ಆಕೆಯ ಹಣೆಯ ಮೇಲೆ ಬಲವಂತವಾಗಿ ಸಿಂಧೂರವನ್ನು ಹಚ್ಚಿದ್ದಾನೆ. ಈ ವೀಡಿಯೋದಲ್ಲಿ, ವ್ಯಕ್ತಿ ಸಿಂಧೂರವನ್ನು ಹಚ್ಚಿದಾಗ ವರ ನಿಂತು ನೋಡುತ್ತಿರುವುದು ಕಂಡುಬಂದಿದೆ. ನಂತರ ಮಹಿಳೆಯ ಮನೆಯವರು ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ.