ನವದೆಹಲಿ: ವಿವಿಧ ಯೋಜನೆಯಡಿ ಬಲವರ್ಧಿತ ಅಕ್ಕಿ ವಿತರಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ. ಭಾರತೀಯ ಆಹಾರ ನಿಗಮ (ಎಫ್ಸಿಐ) ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಇಂಥ ಬಲವರ್ಧಿತ ಅಕ್ಕಿಯನ್ನು 88.65 ಲಕ್ಷ ಮೆಟ್ರಿಕ್ ಶೇಖರಿಸಿದ್ದು, ಇದನ್ನು ಮೂರು ಹಂತದಲ್ಲಿ ವಿತರಿಸಲು ಕೇಂದ್ರ ಒಪ್ಪಿಗೆ ನೀಡಿದೆ ಎಂದು ವಾರ್ತಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
- ಬಲವರ್ಧಿತ ಅಕ್ಕಿ ವಿತರಣೆಗೆ ಸರ್ಕಾರ ಭರಿಸುವ ಮೊತ್ತ 2,700 ಕೋಟಿ ರೂ.
ಇತರ ನಿರ್ಧಾರಗಳು
- ಅಟಲ್ ಇನೋವೇಷನ್ ಮಿಷನ್ (ಎಐಎಂ)ಮುಂದಿನ ವರ್ಷ ಮಾರ್ಚ್ ವರೆಗೆ ವಿಸ್ತರಣೆ
- ಕಲ್ಲಿದ್ದಲು ತೆಗೆಯುವಿಕೆ ಚಾಲ್ತಿಯಲ್ಲಿ ಇಲ್ಲದ ಗಣಿಗಳನ್ನು ಯಾವುದೇ ದಂಡವಿಲ್ಲದೆ ವಾಪಸ್ ನೀಡಲು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಒಮ್ಮೆ ಅವಕಾಶ
ಎಲ್ಲೆಲ್ಲಿ ವಿತರಣೆ?
- ಮೊದಲ ಹಂತ- ಐಸಿಡಿಎಸ್, ಪಿಎಂ ಪೋಷಣ್ ಕಾರ್ಯಕ್ರಮ
- 2ನೇ ಹಂತ- ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಹಾಗೂ ಇತರ ಕಲ್ಯಾಣ ಕಾರ್ಯ ಕ್ರಮ- 2023 ಮಾರ್ಚ್ ಗುರಿ
- 3ನೇ ಹಂತ-ಮೊದಲೆರಡು ಹಂತದಲ್ಲಿ ವಿತರಣೆ ಆಗದ ಎಲ್ಲ ಜಿಲ್ಲೆಯಲ್ಲೂ 2024ರ ಮಾರ್ಚ್ ಒಳಗೆ ವಿತರಿಸಲಾಗುತ್ತದೆ