ಮುಂಬೈ: ಇತ್ತೀಚಿನ ದಿಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಈ ಅಪಾಯಕಾರಿ ಕಾಯಿಲೆಯು ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಬಗ್ಗೆ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 2014ರಲ್ಲಿ ಇಮ್ರಾನ್ ಹಶ್ಮಿ ಅವರ ಮಗ ಅಯಾನ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅಯಾನ್ ಈ ಅಪಾಯದ ವಿರುದ್ಧ ಹೋರಾಡಿ ಐದು ವರ್ಷಗಳ ನಂತರ ಯಶಸ್ವಿಯಾದರು.
ಇಮ್ರಾನ್ ಹಶ್ಮಿ ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕ್ಯಾನ್ಸರ್ ಹೇಗೆ ಸಂಭವಿಸುತ್ತದೆ ಮತ್ತು ಅದನ್ನು ನಿವಾರಿಸಲು ಏನು ಮಾಡಬೇಕು ಎಂಬುದನ್ನು ಹೇಳಿದರು. ಅಯಾನ್ಗೆ ಕ್ಯಾನ್ಸರ್ ಪತ್ತೆಯಾದಾಗ ರೋಗದ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಳ್ಳಬೇಕಾಯಿತು. ಅದರಲ್ಲಿ ಅನುವಂಶೀಯವಾಗಿಯೂ ಕ್ಯಾನ್ಸರ್ ಬರುತ್ತದೆ ಎಂಬುದು ತಿಳಿಯಿತು. ಒಂದು ವೇಳೆ ನಿಮ್ಮ ತಂದೆ, ತಾಯಿ ಅಥವಾ ಅಜ್ಜ ಹೀಗೆ ಕುಟುಂಬದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅನುವಂಶಿಕ ಇತಿಹಾಸವಿದ್ದರೆ ಈ ಕಾಯಿಲೆಯನ್ನು ನಿಯಂತ್ರಿಸುವು ಕಷ್ಟವಾಗುತ್ತದೆ. ಆದರೂ ಕ್ಯಾನ್ಸರ್ ವಿರುದ್ಧ ಹೋರಾಡಬಹುದು.
ಕ್ಯಾನ್ಸರ್ ಬರಲು ಆಹಾರ ಪದ್ಧತಿ, ಫಿಟ್ನೆಸ್, ನಿದ್ರೆ, ಪರಿಸರ ಇವೆಲ್ಲವು ಕಾರಣವಾಗುತ್ತವೆ. ಕುಟುಂಬದ ಅನುವಂಶಿಕವಾಗಿ ಕ್ಯಾನ್ಸರ್ ಅಪಾಯವಿದ್ದರೂ ಸಹ ಈ ವಿಷಯಗಳನ್ನು ಸರಿಯಾಗಿ ಇಟ್ಟುಕೊಳ್ಳುವ ಮೂಲಕ ನೀವು ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅನೇಕ ಅಂಶಗಳಿವೆ ಎಂಬುದೇ ನಮಗೆ ತಿಳಿದಿರುವುದಿಲ್ಲ.
ನಾವು ಸಿಹಿಯನ್ನು ಇಷ್ಟಪಟ್ಟು ಸೇವಿಸುತ್ತೆವೆ. ಸಕ್ಕರೆ ಕ್ಯಾನ್ಸರ್‌ಗೆ ಪ್ರಮುಖ ಕಾರಣ ಎಂದು ತಿಳಿದಾಗ, ನಮ್ಮ ಕುಟುಂಬದವರು ಸಕ್ಕರೆ ಬಳಸುವುದನ್ನೇ ನಿಲ್ಲಿಸಿದೆವು. ಸಕ್ಕರೆ ತ್ಯಜಿಸುವುದು ಕ್ಯಾನ್ಸರ್ ತಪ್ಪಿಸಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ನೀವು ವೈದ್ಯರನ್ನು ಕೇಳಿನೋಡಿ, ಅವರು ಕ್ಯಾನ್ಸರ್‌ಗೆ ಮುಖ್ಯ ಕಾರಣಗಳಲ್ಲಿ ಸಕ್ಕರೆ ಕೂಡ ಒಂದು ಎಂದ ಹೇಳುತ್ತಾರೆ. ಸಕ್ಕರೆ ತಿನ್ನುವುದರಿಂದ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಎಂದು ಸಂಶೋಧನೆಯೊಂದರ ವರದಿಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು. (ಏಜೆನ್ಸೀಸ್)