ನ್ಯೂಸ್

ಕಮಲಾ ಹ್ಯಾರಿಸ್​ ಸಂದರ್ಶನಕ್ಕೆ ಎಲಾನ್​​​ ಮಸ್ಕ್​ ಆಹ್ವಾನ; ಪೋಸ್ಟ್​ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?

ವಾಷಿಂಗ್ಟನ್​​ಡಿಸಿ: ಬಿಲಿಯನೇರ್​​ ಎಲಾನ್​ ಮಸ್ಕ್ ಸೋಮವಾರ(ಆಗಸ್ಟ್​​​ 13) ಅಮೆರಿಕದ ​ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತಮ್ಮ ಸಾಮಾಜಿಕ ಜಾಲತಾಣ​ ಎಕ್ಸ್​​(ಹಿಂದೆ ಟ್ವಿಟರ್​)ನಲ್ಲಿ ಸಂದರ್ಶನ ಮಾಡಿದ್ದಾರೆ. ಸುಮಾರು ಎರಡು ಗಂಟೆ ನಡೆಸಿದ ಇಂಟರ್​ವ್ಯೂನಲ್ಲಿ ಹಲವು ವಿಚಾರಗಳನ್ನು ಕೇಳಿದ್ದಾರೆ.

ಡೊನಾಲ್ಡ್​ ಟ್ರಂಪ್​​ ಬಳಿಕ ಡೆಮಾಟ್ರಿಕ್​ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್​ ಅವರನ್ನು ಸಂದರ್ಶಿಸುವ ತಮ್ಮ ಆಸಕ್ತಿಯನ್ನು ಎಲಾನ್​ ಮಸ್ಕ್​​​ ವ್ಯಕ್ತಪಡಿಸಿದ್ದಾರೆ. ಕಮಲಾ ಹ್ಯಾರಿಸ್​ ಅವರನ್ನು ತಮ್ಮ ಸಾಮಾಜಿಕ ಮಾಧ್ಯಮದ ಪ್ಲಾಟ್​​ಫಾರ್ಮ್​​​ ಎಕ್ಸ್​​ನಲ್ಲಿ ಸಂದರ್ಶನ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಪೋಸ್ಟ್​ ಮಾಡಿದ್ದಾರೆ. ಅಲ್ಲದೆ ರಾಜಕೀಯ ವ್ಯಕ್ತಿಗಳ ಜತೆ ಸಂಪರ್ಕ ಸಾಧಿಸಿ ಮಾತನಾಡಲು ಸಿದ್ಧವಿರುವುದಾಗಿ ತಿಳಿಸಿದರು.

ಎಲಾನ್​ ಮಸ್ಕ್​​ ಕಮಲಾ ಹ್ಯಾರಿಸ್​​ ಅವರ ಸಂದರ್ಶನದ ಬಗ್ಗೆ ಮಾಡಿರುವ ಪೋಸ್ಟ್​ ಅನ್ನು 2.5 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಪೋಸ್ಟ್​ ಮಾಡಿದ 40 ನಿಮಿಷಗಳಲ್ಲಿ ಸುಮಾರು 7,000 ಬಾರಿ ಮರುಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್​ಗೆ ಸಾಕಷ್ಟು ಪ್ರತಿಕ್ರಿಯ ವ್ಯಕ್ತವಾಗುತ್ತಿದೆ. ಕಮಲಾ ಹ್ಯಾರಿಸ್​​ ಚರ್ಚೆಗೆ ಬರುತ್ತಾರೆ ಎಂದು ಕೆಲವರು, ಅವರು ಬರುವುದಿಲ್ಲ ಎಂದು ಮತ್ತೆ ಕೆಲವರು, ಕಮಲಾ ಹ್ಯಾರಿಸ್​​ ಹಾಗೆಲ್ಲಾ ಮಾಡುವುದಿಲ್ಲ. ಪ್ರಚಾರಕ್ಕಿಂತ ಈ ಸಂದರ್ಶನದಲ್ಲಿ ಪಾಲ್ಗೊಳ್ಳುವುದು ಉತ್ತಮ ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ.

ಸೋಮವಾರ ನಡೆದ ಡೊನಾಲ್ಡ್​​ ಟ್ರಂಪ್​​ ಅವರೊಂದಿಗಿನ ಎಲಾನ್​ ಮಸ್ಕ್​ ಅವರ ಲೈವ್​ ಸ್ಟ್ರೀಮ್​ ಅನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹೇಳಿದ ಸಮಯಕ್ಕಿಂತ 40 ನಿಮಿಷಗಳ ತಡವಾಗಿ ಕಾರ್ಯಕ್ರಮ ಪ್ರಾರಂಭವಾಯಿತು. ಅದಕ್ಕೆ ಎಲಾನ್​ ಮಸ್ಕ್​ ಸೈಬರ್​ ದಾಳಿಯಿಂದಾಗಿ ತಡವಾಯಿತು ಎಂದು ಕಾರಣ ಹೇಳಿ ಕ್ಷಮೆಯಾಚಿಸಿದರು. ಆದರೆ ಸೈಬರ್​ ದಾಳಿ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಸುಮಾರ 2 ಗಂಟೆ ನಡದ ಸಂದರ್ಶನದಲ್ಲಿ ಎಲಾನ್​ ಮಸ್ಕ್​, ಡೊನಾಲ್ಡ್​ ಟ್ರಂಪ್​ ಅವರಿಗೆ ಇತ್ತೀಚಿನ ಹತ್ಯೆ ಪ್ರಯತ್ನದ ಬಗ್ಗೆ, ಅಮೆರಿಕ ಚುನಾವಣೆ ಬಗ್ಗೆ, ವಿಶ್ವದ ಜಾಗತಿಕ ಪರಿಸ್ಥಿತಿ ಬಗ್ಗೆ ಹೀಗೆ ಹಲವು ವಿಚಾರಗಳ ಬಗ್ಗೆ ಕೇಳಲಾಯಿತು.

ಸದ್ಯ ಕಮಲಾ ಹ್ಯಾರಿಸ್​ ಅವರನ್ನು ಎಕ್ಸ್​​​ನಲ್ಲಿನ ಲೈವ್​ ಸ್ಟ್ರೀಮ್​ಗೆ ಎಲಾನ್​ ಮಸ್ಕ್​​ ಆಹ್ವಾನಿಸಿದ್ದಾರೆ. ಈ ಆಹ್ವಾನವನ್ನು ಕಮಲಾ ಹ್ಯಾರಿಸ್​​​ ಒಪ್ಪಿಕೊಳ್ಳುತ್ತಾರೆಯೇ ನೋಡಬೇಕಿದೆ. ಏಕೆಂದರೆ ಕಳೆದ ಮೂರು ವಾರಗಳಿಂದ ಕಮಲಾ ಹ್ಯಾರಿಸ್​ ಒಂದೇ ಒಂದು ಸಂದರ್ಶನವನ್ನು ನೀಡಿಲ್ಲ. (ಏಜೆನ್ಸೀಸ್​​)