ನ್ಯೂಸ್

ಬಾಳೆಹಣ್ಣು ತಿನ್ನಲು ತೋಟಕ್ಕೆ ಬಂದು ಶೌಚಾಲಯದ ಗುಂಡಿಗೆ ಬಿದ್ದ ಆನೆ…

ಕೊಡಗು: ಆಗಾಗ ಕಾಡಿನಿಂದ ನಾಡಿಗೆ ಕಾಡಾನೆಗಳು ಬರುತ್ತಲೇ ಇರುತ್ತವೆ. ಕಾಡಿನಲ್ಲಿ ಆಹಾರದ ಕೊರತೆ ಉಂಟಾದಾಗ ಬರುವ ಇವು ತೋಟಗಳಿಗೆ ನುಗ್ಗಿ ಹೊಟ್ಟೆ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತವೆ.

ಈ ಆನೆಯೂ ಬಾಳೆಹಣ್ಣಿನ ಆಸೆಗೆ ತೋಟಕ್ಕೆ ನುಗ್ಗಿದ್ದು ಶೌಚಾಲಯದ ಗುಂಡಿಗೆ ಬಿದ್ದು ಸಾವಿಗೀಡಾಗಿದೆ. ಈ ಘಟನೆ ನಡೆದದ್ದು ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಎಳನೀರು ಗುಂಡಿ ಎಂಬಲ್ಲಿ.

ಈ ಆನೆ ರಾತ್ರಿ ನಿಡ್ತ ಮೀಸಲು ಅರಣ್ಯದಿಂದ ಆಗಮಿಸಿದೆ. ಈ ಸಂದರ್ಭ ಚಂದ್ರಶೇಖರ್ ಎನ್ನುವವರ ತೋಟಕ್ಕೆ ನುಗ್ಗಿದ್ದು ಅವರ ಮನೆಯ ಹಳೆಯ ಶೌಚಾಲಯದ ಗುಂಡಿಗೆ ಬಿದ್ದಿದೆ. ಆನೆಯ ಗಾತ್ರಕ್ಕೆ ಗುಂಡಿ ತೀರ ಸಣ್ಣದಾಗಿದ್ದು ಅದರಿಂದ ಹೊರಬರಲಾಗದೇ ಆನೆ ಮೃತಪಟ್ಟಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ಪರಿಶೀಲನೆ ನಡೆಸುತ್ತಿದ್ದು ಆನೆಯ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.