ಕಳೆದ ವರ್ಷ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ಸಿನಿಮಾದ 'ಜೈಲರ್'. ಅಭಿಮಾನಿಗಳಿಗೆ ಒಂದು ಭರ್ಜರಿ ಎಂಟರ್‌ಟೇನ್‌ಮೆಂಟ್ ಸಿನಿಮಾ ನೀಡಬೇಕು ಎಂದುಕೊಂಡಿದ್ದ ರಜನಿಕಾಂತ್, 'ಜೈಲರ್' ಮೂಲಕ ಅದನ್ನು ಪೂರೈಸಿದ್ದರು.
ಇದನ್ನೂ ಓದಿ:ಸಾರ್ವತ್ರಿಕ ಲೋಕಸಭಾ ಚುನಾವಣೆ : ವಿವಿಧ ಸಮಿತಿ ರಚನೆ
ರಜನೀಕಾಂತ್ ಜೊತೆಗೆ ಸಿನಿಮಾದಲ್ಲಿ ನಟಿಸಿದ್ದ ಶಿವಣ್ಣ ಅವರ ಅತಿಥಿ ಪಾತ್ರಕ್ಕೂ ಭಾರಿ ಜನಪ್ರಿಯತೆ ಧಕ್ಕಿತ್ತು, ಈ ಚಿತ್ರದ ಫಸ್ಟ್ ಸಾಂಗ್ ಭಾರಿ ಹವಾ ಕ್ರಿಯೇಟ್ ಮಾಡಿತ್ತು. ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಅಧಿಕ ವೀಕ್ಷಣೆ ಪಡೆದುಕೊಂಡಿತ್ತು.
ʼಜೈಲರ್ʼ ಚಿತ್ರದ ಕಾವಾಲಾ ಹಾಡು ಮಾಸ್ ಸಾಂಗ್ ಆಗಿದೆ. ಸಾಂಗ್ ಮಾಸ್ ಆಗಿರೊದ್ರಿಂದ ಎಲ್ಲರ ಗಮನ ಸೆಳೆದಿತ್ತು. ಇನ್ನು ಹಾಡಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿತ್ತು. ಇದೀಗ ರಜನಿಕಾಂತ್ 72 ರ ಹರೆಯಲ್ಲಿ ಭರ್ಜರಿ ಸ್ಟೆಪ್ ಕಂಡು ಅಭಿಮಾನಿಗಳು ನಮ್ಮ ಬಾಸ್ ಗೆ ದೃಷ್ಠಿ ಹಾಕಬೇಡಿ ಎಂದಿದ್ದರು.
ಈ ಕಾವಾಲಯ್ಯ ಹಾಡಿಗೆ ಅಭಿಮಾನಿಗಳು ಸೇರಿದಂತೆ ದೊಡ್ಡ ಸೆಲೆಬ್ರೆಟಿಗಳು ಅವರ ಮಕ್ಕಳು ಡ್ಯಾನ್ಸ್ ಮಾಡಿದ್ದರು. ಲೀಸ್ಸ್ ಮಾಡಿ ಎಂಜಾಯ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಆದರೆ ಈ ಸಾಂಗ್ಗೆ ಆನೆಯೊಂದು ಭರ್ಜರಿ ಡ್ಯಾನ್ಸ್ ಮಾಡಿ ಎಲ್ಲರನ್ನು ಆಕರ್ಷಿಸಿದೆ. ಆನೆ ಡ್ಯಾನ್ಸ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಗಜರಾಜನ ಡ್ಯಾನ್ಸ್ ವಿಡಿಯೋ ನೋಡಿ ಆಶ್ಚರ್ಯ ಪಡುತ್ತಿದ್ದಾರೆ. ಮೂಕಪ್ರಾಣಿಗಳಿಗೂ ಸಂಗೀತ, ಹಾಡುಗಳು ಅರ್ಥವಾಗುತ್ತೆ ಅಂತಿದ್ದಾರೆ. ಆದರೆ ಈ ವಿಡಿಯೋದಲ್ಲಿ ಸಣ್ಣ ಟ್ಟಿಸ್ಟ್ ಇದೆ. ಅದು ನಿಜವಾದ ಆನೆ ಅಲ್ಲವೇ ಅಲ್ಲ. ಆನೆಯಂತಿರುವ ವೇಷ ಧರಿಸಿರುವ ಇಬ್ಬರು ಪುರುಷರು ಸಾಂಗ್ಗೆ ಕುಣಿದಾಡಿದ್ದಾರೆ. ಆದರೆ ಇದು ನಿಜವಾದ ಆಟಿಕೆಯಂತೆ ಕಾಣುವುದಿಲ್ಲ. ಆನೆ ಡ್ಯಾನ್ಸ್ ವಿಡಿಯೋಗೆ ಜನರು ಕುಣಿದು ಕುಪ್ಪಳಿಸಿದ್ದಾರೆ. ಜೈಲರ್ ಸಿನಿಮಾದ ಈ ಹಾಡನ್ನು ಅನಿರುದ್ಧ್ ರವಿಚಂದರ್ ಕೊಡುಗೆ ನೀಡಿದ್ದಾರೆ.