ನ್ಯೂಸ್

ಕಡಬ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಆನೆ ದಾಳಿ! ಇಬ್ಬರ ದುರ್ಮರಣ…

Webdesk - Athul Damale

ಕಡಬ: ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಕಾಡಂಚಿನ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಕಾಡನೆ ದಾಳಿ ನಡೆಸಿದ್ದು ಯುವತಿ ಸಹಿತ ಇಬ್ಬರು ಮೃತಪಟ್ಟಿದ್ದಾರೆ.

ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ(21) ಎಂಬವರು ಸೊಸೈಟಿ ಗೆ ಮನೆಯಿಂದ ಕಾಡಂಚಿನ ದಾರಿಯಲ್ಲಿ ಹೋಗುತ್ತಿದ್ದ ವೇಳೆ ನೈಲ ಎಂಬಲ್ಲಿ ಆನೆ ದಾಳಿ ನಡೆಸಿತ್ತು. ಯುವತಿ ಬೊಬ್ಬೆ ಕೇಳಿ ಸ್ಥಳೀಯ ನಿವಾಸಿ ರಮೇಶ್ ರೈ ಸ್ಥಳಕ್ಕೆ ಬಂದಿದ್ದಾರೆ. ಇದರಿಂದಾಗಿ ಆನೆಯ ಗಮನ ಯುವತಿಯ ಮೇಲಿನಿಂದ ರಮೇಶ್​ ಮೇಲೆ ಬಂದಿದ್ದು ಅವರ ಮೇಲೂ ದಾಳಿ ನಡೆಸಿದೆ. ರಮೇಶ್ ರೈ (55) ಸ್ಥಳದಲ್ಲಿ ಮೃತಪಟ್ಟರೆ ರಂಜಿತ ಅವರು ನೆಲ್ಯಾಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ .