ನ್ಯೂಸ್

ಕನಕಪುರದಲ್ಲಿ ಆನೆ ದಾಳಿ: ಅರಣ್ಯ ವೀಕ್ಷಕ ಸಾವು

arunakunigal

ರಾಮನಗರ: ಕನಕಪುರ ತಾಲೂಕಿನ ಬಿಳಿಕಲ್ಲು ಅರಣ್ಯ ಪ್ರದೇಶದ ಸುಂಡಘಟ್ಟ ಗ್ರಾಮದಲ್ಲಿ ಸೋಮವಾರ ಆನೆ ದಾಳಿಗೆ ಅರಣ್ಯ ವೀಕ್ಷಕರೊಬ್ಬರು ಬಲಿಯಾಗಿದ್ದಾರೆ.

ಸುಂಡಘಟ್ಟ ಗ್ರಾಮದ ಹೊಳಸಾಲಯ್ಯ(60) ಆನೆ ತುಳಿತಕ್ಕೆ ಬಲಿಯಾದವರು. ಹೊರಗುತ್ತಿಗೆ ಆಧಾರದ ಮೇಲೆ ಅರಣ್ಯ ವೀಕ್ಷಕನಾಗಿ ಹೊಳಸಾಲಯ್ಯ ಕೆಲಸ ಮಾಡುತ್ತಿದ್ದರು. ಜನನಿಬಿಡ ಪ್ರದೇಶಕ್ಕೆ ಕಾಡಾಣೆ ಬಂದಿತ್ತು. ಆ ವೇಳೆ ಕಾಡಿಗೆ ಆನೆಯನ್ನು ಓಡಿಸುವಾಗ ಹೊಳಸಾಲಯ್ಯರನ್ನ ಆನೆ ತುಳಿದು ಸಾಯಿಸಿದೆ.

ಕನಕಪುರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಕನಕಪುರ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.