ನ್ಯೂಸ್

ಸೆಪ್ಟಂಬರ್​ನಲ್ಲಿ ಸಿನಿಪ್ರೇಕ್ಷಕರಿಗೆ ಭರಪೂರ ಮನರಂಜನೆ! 8 ಬಹುನಿರೀಕ್ಷಿತ ಚಿತ್ರಗಳು ತೆರೆಗೆ

ಬೆಂಗಳೂರು: ಕಳೆದ ಒಂದೆರೆಡು ತಿಂಗಳಿಂದ ಭಾರತೀಯ ಚಿತ್ರೋದ್ಯಮ ಸಂಪೂರ್ಣ ಮಕಾಡೆ ಮಲಗಿದ್ದು, ಬಾಲಿವುಡ್​, ಸ್ಯಾಂಡಲ್​ವುಡ್​, ಟಾಲಿವುಡ್​, ಕಾಲಿವುಡ್​ ಮತ್ತು ಮಾಲಿವುಡ್​ ಚಿತ್ರರಂಗದ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿಲ್ಲ. ರಿಲೀಸ್ ಆಗುವ ವೇಳೆ ಭರ್ಜರಿ ಓಪನಿಂಗ್ ಪಡೆಯುವ ಸ್ಟಾರ್ ನಟರ ಚಿತ್ರಗಳು ತೆರಕಂಡ ಮೊದಲ ಒಂದು ವಾರದ ನಂತರ ಚಿತ್ರಮಂದಿರಗಳಲ್ಲಿ ಉಳಿಯಲು ತೀರ ಕಷ್ಟಪಡುತ್ತಿವೆ. ಆದ್ರೆ, ಆಗಸ್ಟ್​ನಲ್ಲಿ ಬಿಡುಗಡೆಗೊಂಡ ಒಂದಷ್ಟು ಚಿತ್ರಗಳ ಪೈಕಿ ಕೆಲವೇ ಕೆಲವು ಸಿನಿಮಾಗಳು ಮತ್ತೆ ಪುಟಿದೇಳುವ ಭರವಸೆ ಕೊಟ್ಟಿದೆ.

ದಕ್ಷಿಣ ಭಾರತದ ಸಿನಿಮಾಗಳು ಆಗಸ್ಟ್​ನಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಾಲಿನಲ್ಲಿ ಬಾಲಿವುಡ್​ನ 'ಸ್ತ್ರೀ 2', ಸ್ಯಾಂಡಲ್​ವುಡ್​ನ 'ಕೃಷ್ಣ ಪ್ರಣಯಂ ಸಖಿ', 'ಭೀಮ' ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ದಾಖಲಿಸಿವೆ. ಈ ಮೂಲಕ ಪುಟಿದೇಳುವ ಮುನ್ಸೂಚನೆ ನೀಡಿದೆ. ಒಂದೆಡೆ ಈ ಸಿನಿಮಾಗಳು ಥಿಯೇಟರ್​ಗಳಲ್ಲಿ ಗೆಲುವಿನ ಓಟವನ್ನು ಮುಂದುವರೆಸಿದ್ದರೆ, 'ಇಸ್ಮಾರ್ಟ್​ ಶಂಕರ್'​, 'ಮಿ. ಬಚ್ಚನ್' ಮತ್ತು 'ತಂಗಾಲಾನ್' ಚಿತ್ರಗಳು ಕಡಿಮೆ ಶೋಗಳನ್ನು ಪಡೆದು, ಅಬ್ಬರಿಸುವಲ್ಲಿ ವಿಫಲವಾಗಿದೆ.

ಇನ್ನು ತಿಂಗಳ ಕೊನೆಯಲ್ಲಿ ಬಿಡುಗಡೆಗೊಂಡಿರುವ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ಸರಿಪೋದ ಶನಿವಾರಂ' ಚಿತ್ರ ಸದ್ಯ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಪ್ರಾರಂಭ ಕಂಡಿದ್ದು, ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬುತ್ತಿದೆ. ಇದೀಗ ಇದೇ ಖುಷಿಯಲ್ಲಿ ಸೆಪ್ಟಂಬರ್​ಗೆ ಕಾಲಿಟ್ಟಿರುವ ನಾನಿ ಸಿನಿಮಾ, ಮಿಂಚಿನ ಓಟ ಮುಂದುವರೆಯಲಿ ಎಂದು ಆಶಿಸಿದೆ. ಸದ್ಯ ಸೆ. ತಿಂಗಳು ಸಿನಿಪ್ರಿಯರಿಗೆ ಹಬ್ಬವಾಗಲಿದ್ದು, ಭರಪೂರ ಮನರಂಜನೆ ನೀಡಲು ಸಾಲು ಸಾಲು ಸಿನಿಮಾಗಳು ತೆರೆ ಕಾಣಲು ಸಜ್ಜಾಗಿ ನಿಂತಿವೆ.

ಯಾವ ದಿನದಂದು ಯಾವ ಚಿತ್ರಗಳು ತೆರೆಕಾಣುತ್ತಿವೆ:

  • ಇಬ್ಬನಿ ತಬ್ಬಿದ ಇಳೆಯಲಿ (ಕನ್ನಡ): ಸೆ. 05
  • ವಿಜಯ್ ಅಭಿನಯದ ಗೋಟ್​ (ತಮಿಳು): ಸೆ. 05
  • ARM- ಅಜಯಂತೇ ರಂದಂ ಮೋಷನಂ (ಮಲಯಾಳಂ): ಸೆ.12
  • ಚಿನ್ನ ಕಥಾ ಕಾದು 35 (ತೆಲುಗು): ಸೆ.06
  • ದೇವರ 1 (ತೆಲುಗು): ಸೆ.27
  • ಕೊಂಡಾಲ್ (ಮಲಯಾಳಂ): ಸೆ.13
  • ಕರ್ಕಿ ನಾನು ಬಿಎ, ಎಲ್‌ಎಲ್‌ಬಿ (ಕನ್ನಡ): ಸೆ.27
  • ಮೀಯಾಳಗನ್ (ತಮಿಳು): ಸೆ.27