ನವದೆಹಲಿ: ಶಿಕ್ಷಣ ಅನ್ನೋದು ಹಣ ಮಾಡುವ ವ್ಯಾಪಾರ ಅಲ್ಲ. ಕಾಲೇಜುಗಳಲ್ಲಿ ಟ್ಯೂಶನ್ ಫೀಸುಗಳು ಹೆಚ್ಚಾಗಬಾರದು ಎಂದು ಸುಪ್ರೀಂ ಕೋರ್ಟ್ ಆಂಧ್ರಪ್ರದೇಶ ಸರ್ಕಾರಕ್ಕೆ ಚಾಟಿ ಬೀಸಿದೆ.
ಈ ಹಿಂದೆ ಆಂಧ್ರಪ್ರದೇಶ ಸರ್ಕಾರ ವೈದ್ಯಕೀಯ ಕಾಲೇಜುಗಳ ಫೀಸನ್ನು 24 ಲಕ್ಷ ಮಾಡಲು ಹೊರಟಿತ್ತು. ಆಗ ಈ ನಿರ್ಧಾರ ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣ ಆಂಧ್ರಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದಾಗ ಕೋರ್ಟ್, ಶುಲ್ಕ ಏರಿಸದಂತೆ ನಿರ್ಬಂಧ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಆಂಧ್ರ ಸರ್ಕಾರ ಸುಪ್ರೀಂ ಮೆಟ್ಟಿಲೇರಿತ್ತು.
'ಟ್ಯೂಶನ್ ಶುಲ್ಕವನ್ನು ಏಳು ಪಟ್ಟು ಹೆಚ್ಚಿಸುವುದು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಶಿಕ್ಷಣ ಎನ್ನುವುದು ಲಾಭ ಪಡೆಯಲು ಮಾಡುವ ವ್ಯಾಪಾರ ಅಲ್ಲ. ಟ್ಯೂಶನ್ ಶುಲ್ಕ ಕೈಗೆಟಕುವ ದರದಲ್ಲೇ ಇರಲಿದೆ' ಎಂದು ನ್ಯಾಯಾಧೀಶರ ಪೀಠ ಹೇಳಿದೆ. (ಏಜೆನ್ಸೀಸ್)