ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಅವರ ಅಧೀನದಲ್ಲಿ ನರುವ ಎಲ್ಲ ಕಚೇರಿಗಳು ಮತ್ತು ಶಾಲೆಗಳ ನಾಮಲಕವನ್ನು ‘ಶಾಲಾ ಶಿಕ್ಷಣ ಇಲಾಖೆ’ ಎಂದು ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸಚಿವಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ ಎಂದು ಮರುಪದನಾಮೀಕರಣಗೊಳಸಿ ಆದೇಶಿಸಲಾಗಿರುತ್ತದೆ. ಕರ್ನಾಟಕ ಸರ್ಕಾರದ ನಿಯಮಗಳು-1977 ಅನುಸೂಚಿ-5 ರಲ್ಲಿದ್ದ ಶಿಕ್ಷಣ ಇಲಾಖೆ ಶೀರ್ಷಿಕೆಗೆ ಕೂಡ ತಿದ್ದುಪಡಿ ತರಲಾಗಿದೆ. ಅದೇ ರೀತಿ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ‘ಶಾಲಾ ಶಿಕ್ಷಣ ಇಲಾಖೆ’ ಎಂದು ಬದಲಾವಣೆ ಮಾಡಲಾಗಿದೆ.
ಶಿಕ್ಷಣ ಇಲಾಖೆ ಆಯುಕ್ತರು, ಕಲಬುರಗಿ ಮತ್ತು ಧಾರವಾಡ ಅಪರ ಆಯುಕ್ತಾಲಯ, ನಿರ್ದೇಶನಾಲಯಗಳು, ಜಿಲ್ಲಾ ಮತ್ತು ತಾಲ್ಲೂಕು/ಬ್ಲಾಕ್ ಕಚೇರಿಗಳು, ವಿಭಾಗ ಹಂತದ ಕಚೇರಿಗಳು, ಜಿಲ್ಲಾ ಹಂತದ ಉಪನಿರ್ದೇಶಕರು, ಡಯಟ್ ಪ್ರಾಂಶುಪಾಲರ ಕಚೇರಿ, ಬ್ಲಾಕ್ ಹಂತದ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ಹಾಗೂ ಕ್ಲಸ್ಟರ್ ಕಚೇರಿಗಳು ‘ಶಾಲಾ ಶಿಕ್ಷಣ’ವೆಂದು ಬದಲಾವಣೆ ಮಾಡಲಾಗಿದೆ.
ಸಮಗ್ರ ಶಿಕ್ಷಣ ಕರ್ನಾಟಕ (ಎಸ್‌ಎಸ್‌ಕೆ)ವನ್ನು ಕೂಡ ಶಾಲಾ ಶಿಕ್ಷಣ ಇಲಾಖೆ ಎಂದು ಬದಲಾವಣೆ ಮಾಡಲಾಗಿದೆ. ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ‘ಶಾಲಾ ಶಿಕ್ಷಣ’ವೆಂದು ಬದಲಾವಣೆ ಮಾಡಬೇಕು. ಎಲ್ಲ ಕಚೇರಿ ಹಾಗೂ ಶಾಲೆಗಳ ನಾಮಲಕದಲ್ಲಿ ‘ಶಾಲಾ ಶಿಕ್ಷಣ ಇಲಾಖೆ’ ಎಂದು ಬರೆಯಲು ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಈ ದೇಶದಲ್ಲಿ ಇನ್ಮುಂದೆ ಮಕ್ಕಳ ಫೋಟೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಬಾರದಂತೆ!