ನವದೆಹಲಿ: ತಾಂತ್ರಿಕ ಶಿಕ್ಷಣದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದ ಅನೇಕ ಪ್ರತಿಭಾನ್ವಿತರೂ ಜೈಲಿಗೆ ಸೇರಿದ್ದಾರೆ. ಎನ್ಸಿಆರ್ಬಿಯ ಕ್ರೈಂ ಇನ್ ಇಂಡಿಯಾ-2019 ವರದಿಯ ಪ್ರಕಾರ 3,740 ತಾಂತ್ರಿಕ ಶಿಕ್ಷಣದ ಪದವೀಧರರು ಅಥವಾ ಡಿಪ್ಲೊಮಾ ಕಲಿತವರು ಮತ್ತು 5,282 ಸ್ನಾತಕೋತ್ತರ ಪದವೀಧರರು ಜೈಲು ಹಕ್ಕಿಗಳಾಗಿದ್ದಾರೆ. ಈ ರೀತಿಯ ವಿದ್ಯಾವಂತರು ಉತ್ತರ ಪ್ರದೇಶದ ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.
ಜೈಲಿನಲ್ಲೂ ಇಂಜಿನಿಯರಿಂಗ್ ಕೆಲಸ : ದೇಶದಲ್ಲಿ 3,30,487 ಅಪರಾಧಿಗಳಿದ್ದರೆ ಅದರಲ್ಲಿ ಶೇ. 1.67 ಜನರು ಸ್ನಾತಕೋತ್ತರ ಪದವೀಧರರು ಮತ್ತು ಶೇ. 1.2 ಕೈದಿಗಳು ಇಂಜಿನಿಯರ್ಗಳಾಗಿದ್ದಾರೆ. ಈ ಇಂಜಿನಿಯರ್ಗಳು ಜೈಲಿನಲ್ಲೂ ವೃತ್ತಿ ನೈಪುಣ್ಯವನ್ನು ತೋರ್ಪಡಿಸುತ್ತಿದ್ದಾರೆ. ಇ-ಜೈಲು ಮಾಡೆಲ್, ಸೇರಿದಂತೆ ಅನೇಕ ತಂತ್ರಜ್ಞಾನ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದು ಉತ್ತರ ಪ್ರದೇಶದ ಕಾರಾಗೃಹದ ಮಹಾನಿರ್ದೇಶಕ ಆನಂದ್ ಕುಮಾರ್ ತಿಳಿಸಿದ್ದಾರೆ.