ನ್ಯೂಸ್

ದೇಹವನ್ನು ಫಿಟ್​ ಆಗಿರಿಸಲು ಈ ಆಹಾರಗಳನ್ನು ಸೇವಿಸಿರಿ! Fitness food

Fitness food: ಇಂದಿನ ದಿನಗಳಲ್ಲಿ ಜನರು ಫಿಟ್​ ಆಗಿರಲು ಬಯಸುತ್ತಾರೆ. ಹಾಗಾಗಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಆದರೂ, ಫಿಟ್​ ಆಗಿರಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಚಿಕಿತ್ಸೆಗೆ ಒಳಗಾಗುತ್ತಾರೆ. ಹಾಗಾಗಿ ದೇಹವನ್ನು ಫಿಟ್​ ಆಗಿರಲು ಬಯಸುವವರು ಈ ರೀತಿಯ ಆಹಾರಗಳನ್ನು ಸೇವಿಸುವುದರಿಂದ ಫಿಟ್​ ಆಗಿರಬಹುದು.

1. ಓಟ್ಸ್​ ಸ್ಮೂಥಿ

ಬೇಕಾಗುವ ಪದಾರ್ಥಗಳು

* 1 ಕಪ್ ಓಟ್ಸ್ (ರಾತ್ರಿ ನೆನಸಿಡಿ)

* 1 ಬಾಳೆಹಣ್ಣು

* 1 ಕಪ್ ಸ್ಟ್ರಾಬೆರಿ, ಬ್ಲೂಬೆರಿ ಹಣ್ಣು

* 1 ಚಮಚ ಚಿಯಾ ಸೀಡ್ಸ್

* 1 ಕಪ್ ಮೊಸರು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಓಟ್ಸ್ ಮತ್ತು ಮೊಸರನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಇದಕ್ಕೆ ಬಾಳೆಹಣ್ಣು, ಸ್ಟ್ರಾಬೆರಿ, ಬ್ಲೂಬೆರಿ, ಚಿಯಾ ಸೀಡ್ಸ್​ ಸೇರಿಸಿ ಮಿಕ್ಸ್​ ಮಾಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.

2. ಗ್ರಿಲ್ಡ್ ಚಿಕನ್ ಸಲಾಡ್

ಬೇಕಾಗುವ ಪದಾರ್ಥಗಳು

* 200ಗ್ರಾ ಚಿಕನ್

* 1 ಕಪ್ ಬೇಯಿಸಿದ ಕ್ವಿನೋವಾ

* ಹಸಿರು ತರಕಾರಿ

* 1 ಅವಕಾಡೋ

* 2 ಟೊಮಾಟೋ

* ಎಣ್ಣೆ

* ನಿಂಬೆ ರಸ

* ಉಪ್ಪು

* ಮೆಣಸಿನ ಪುಡಿ

ಮಾಡುವ ವಿಧಾನ

ಮೊದಲು ಚಿಕನ್​ಗೆ ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ (ಗ್ರಿಲ್​) ಸುಡಬೇಕು. ನಂತರ ಒಂದು ಪಾತ್ರಗೆ ಬೇಯಿಸಿದ ಕ್ವಿನೋವಾ, ತರಕಾರಿ, ಉಪ್ಪು, ಮೆಣಸಿನ ಪುಡಿ, ನಿಂಬೆ ರಸ ಸೇರಿಸಿ ಮಿಕ್ಸ್​ ಮಾಡಬೇಕು. ಈ ಆಹಾರವನ್ನು ಮಧ್ಯಾಹ್ನದ ಊಟದೊಂದಿಗೆ ಸೇವಿಸುವುದು ಉತ್ತಮವಾಗಿದೆ.

3. ಗೆಣಸು ಮತ್ತು ಮೊಟ್ಟೆಯ ಸಲಾಡ್​

ಬೇಕಾಗುವ ಪದಾರ್ಥಗಳು

* 2 ಬೇಯಿಸಿದ ಗೆಣಸು

* 4 ಮೊಟ್ಟೆಗಳು

* ಪಾಲಕ್​ ಸೊಪ್ಪು

* ಎಣ್ಣೆ

* ಉಪ್ಪು

ಮಾಡುವ ವಿಧಾನ

ಮೊದಲು ಗೆಣಸನ್ನು ಬೇಯಿಸಿಕೊಂಡು ನಂತರ ಮ್ಯಾಶ್ ಮಾಡಿ. ನಂತರ ಮೊಟ್ಟೆಗಳನ್ನು ಬೇಯಿಸಿಕೊಂಡು ಮಿಕ್ಸ್​ ಮಾಡಿ. ಇದಕ್ಕೆ ಪಾಲಕ್​ನ್ನು ಸೇರಿಸಿ. ಮಿಶ್ರಣ ಮಾಡಿ ನಂತರ ಓವನ್‌ನಲ್ಲಿ 180°C 15 ನಿಮಿಷಗಳು ಬೇಯಿಸಿ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.