ಪಾಲಕ್ ಪನ್ನೀರ್ ಗ್ರೇವಿ ಯಾರಿಗೆ ಇಷ್ಟ ಇರೋದಿಲ್ಲ ಹೇಳಿ. ಚಪಾತಿ, ರೋಟಿಗೆ ಮಸ್ತ್ ಕಾಂಬಿನೇಷನ್. ಹೋಟೆಲ್ ಶೈಲಿಯಲ್ಲಿ ಈ ರುಚಿಕರ ಪಾಲಕ್ ಪನ್ನೀರನ್ನು ಮನೆಯಲ್ಲಿಯೇ ಮಾಡಬಹುದು. ಚಿಕ್ಕಮಕ್ಕಳಿನಿಂದ ದೊಡ್ಡವರು ಇಷ್ಟು ಪಡುವಂತಹ ಟೇಸ್ಟಿ ಗ್ರೇವಿ. ಪಾಲಕ್ ಎತ್ತೇಚ್ಚವಾಗಿ ಕಬ್ಬಿಣಾಂಶವನ್ನು ಹೊಂದಿದೆ. ಪನ್ನೀರ್ ಪೊಟ್ಯಾಸಿಯಮ್‌ನ ಸಮೃದ್ಧ ಮೂಲವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವುದರ ಜತೆಗೆ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಪಾಲಕ್ ಪನ್ನೀರ್ ಮಾಡುವ ಸಿಂಪಲ್ ವಿಧಾನ ಇಲ್ಲಿದೆ..
- ಪನ್ನೀರ್ 500 ಗ್ರಾಂ
- ಹಸಿಮೆಣಸಿಕಾಯಿ
- ಈರುಳ್ಳಿ
- ಬೆಳ್ಳುಳ್ಳಿ
- ಒಣಮೆಣಸಿನ ಕಾಯಿ
- ಚಿಲ್ಲಿ, ಧನಿಯಾ ಪೌಡರ್
- ಗರಂ ಮಸಾಲ
- ಅರಿಶಿನಪುಡಿ
- 1 ಕಟ್ ಪಾಲಕ್
- ಅಡುಗೆ ಎಣ್ಣೆ
ಪಾಲಕ್ ಪನ್ನೀರ್ ಮಾಡುವ ವಿಧಾನ:
- ಪಾಲಕ್ ಅನ್ನು ನೀರಿನಲ್ಲಿ ಬೇಯಿಸಿ ಬಳಿಕ ಅದನ್ನು ತಣ್ಣಗಿನ ನೀರಿನಲ್ಲಿ ಹಾಕಿ. (ಬಳಸುವುದಾದರೆ ತಣ್ಣಗಿನ ನೀರಿಗೆ ಐಸ್ಕೂಬ್ ಬಳಸಬಹುದು) ಸ್ವಲ್ಪ ಸಮಯದ ನಂತರ ಪಾಲಕ್ ಜತೆಗೆ ಒಂದು ಹಸಿಮೆಣಸಿಕಾಯಿ, ಬೆಳ್ಳುಳ್ಳಿ 2 ಎಸಳು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಲಿಬೇಕು.
- ಒಂದು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಾಣೆಲೆಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಯನ್ನು ಗೋಲ್ಡನ್ ಕಲರ್ ಬರುವವರೆಗೆ ಫ್ರೈ ಮಾಡಿ ಅದನ್ನು ಬಳಿಕ ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ.
ಪನ್ನೀರ್ ಅನ್ನು ಬಾಕ್ಸ್ ರೂಪದಲ್ಲಿ ಕಟ್ ಮಾಡಿಕೊಂಡು, ಬಾಣಲೆಯಲ್ಲಿ ಸ್ವಲ್ಪ ಅಡುಗೆ ಎಣ್ಣೆ ಹಾಕಿ ಗೋಲ್ಡನ್ ಕಲರ್ ಬರುವವರೆಗೂ ಫ್ರೈ ಮಾಡಿ.
- ಬಳಿಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ 3ಏಲಕ್ಕಿ, 1ಚಕ್ಕೆ 3ಲವಂಗ, ಸ್ವಲ್ಪ ಜಿರಿಗೆ, 3 ಒಣಗಿದ ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ ಮತ್ತು ಈರುಳ್ಳಿ, ಉದ್ದವಾಗಿ ಹೆಚ್ಚಿದ 2 ಹಸಿಮೆಣಸಿಕಾಯಿಯನ್ನು ಹಾಕಿ, ಈರುಳ್ಳಿ ಪೇಸ್ಟ್ ಅನ್ನು ಹಾಕಿ ಫ್ರೈ ಮಾಡಿ.
- ಅರಿಸಿನಪುಡಿ, ಸ್ವಲ್ಪ ಚಿಲ್ಲಿ ಪೌಡರ್, ಧನಿಯಾಪುಡಿ, ಸ್ವಲ್ಪ ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2 ಸೆಕೆಂಡ್ ಬಳಿಕ ರುಬ್ಬಿದ ಪಾಲಕ್ ಸೇರಿಸಿ ಮಿಕ್ಸ್ ಮಾಡಿ. ಗ್ರೇವಿ ಹದಕ್ಕೆ ತಕ್ಕಂತೆ ಸ್ವಲ್ಪ ನೀರು ಸೇರಿಸಿ. ಸ್ವಲ್ಪ ಸಮಯದ ಬಳಿಕ ಫ್ರೈ ಮಾಡಿರುವ ಪನ್ನೀರ್ ಸೇರಿಸಿ 5 ನಿಮಿಷ ಬೇಯಿಸಿದರೆ ಪಾಲಕ್ ಪನ್ನೀರ್ ಸವಿಯಲು ಸಿದ್ಧ.