ರುಚಿಕರವಾದ ಚಿಕನ್ ಕಟ್ಲೆಟ್ ಅನ್ನು ಮಕ್ಕಳು ಇಷ್ಟಪಡದೇ ಇರಲು ಸಾಧ್ಯವೆ ಇಲ್ಲ. ಪ್ರೋಟೀನ್ ಸಮೃದ್ಧವಾಗಿರುವ ಇದು ಮಕ್ಕಳಿಗೆ ಅತ್ಯಗತ್ಯ ಆಹಾರದಲ್ಲಿ ಒಂದು ಎಂದರೆ ತಪ್ಪಾಗಲಾರದು. ನೀವು ಈ ಚಿಕನ್ ಕಟ್ಲೆಟ್ ಅನ್ನು ಸ್ಯಾಂಡ್ವಿಚ್ಗಳಿಗೂ ಬಳಸಬಹುದು. ಬರ್ತ್ಡೆ, ಕಿಟ್ಟಿ ಪಾರ್ಟಿಗಳಲ್ಲಿ ಸುಲಭವಾಗಿ ತಯಾರಿಸಬಹುದಾದ ಸಿಂಪಲ್ ರೆಸಿಪಿ. ಚಿಕನ್ ಕಟ್ಲೆಟ್ ಮಾಡುವ ಸುಲಭ ವಿಧಾನ ಹೀಗಿದೆ
- 250 ಗ್ರಾಂ ಬೋನ್ಲೆಸ್ ಚಿಕನ್
- 6-7 ಬ್ರೆಡ್ ಪಿಸ್
- ರುಚಿಗೆ ತಕ್ಕಂತೆ ಉಪ್ಪು
- 1 ತುಣುಕು ಶುಂಠಿ
- ಬೆಳ್ಳುಳ್ಳಿ
- 3 ಹಸಿರು ಮೆಣಸಿನಕಾಯಿ
- ಮೆಣಸು
- ಕೆಂಪು ಮೆಣಸಿನಕಾಯಿ
- 4 ಸ್ಪೂನ್ಗಳಷ್ಟು ಮೈದಾ ಹಿಟ್ಟು
- ಅಡುಗೆ ಎಣ್ಣೆ
ಚಿಕನ್ ಕಟ್ಲೆಟ್ ಮಾಡುವ ವಿಧಾನ:
- ಎರಡು ಬ್ರೆಡ್ ತುಂಡುಗಳಿಗೆ ಅರ್ಧ ಕಪ್ ಹಾಲು ಸೇರಿಸಿ 10 ನಿಮಿಷಗಳ ಕಾಲ ನೆನೆಸಿ.
- ಮೊದಲು ಮಿಕ್ಸರ್ ಜಾರ್ ತೆಗೆದುಕೊಂಡು ಅದರಲ್ಲಿ ಶುಚಿಗೊಳಿಸಿದ ಬೋನ್ ಲೆಸ್ ಚಿಕನ್ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ನಂತರ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ, 2 ಚಮಚ ಮೈದಾಹಿಟ್ಟು, ಕೆಂಪು ಮೆಣಸಿನಕಾಯಿ, ಉಪ್ಪು ಮತ್ತು ಕರಿಮೆಣಸು, ಒಂದು ಮೊಟ್ಟೆ, ಹಾಲಿನಲ್ಲಿ ನೆನೆಸಿದ ಬ್ರೆಡ್ ಅನ್ನು ರುಬ್ಬಿದ ಚಿಕನ್ಗೆ ಸೇರಿಸಿ ಮಿಶ್ರಣ ಮಾಡಿ. ಇದನ್ನು 15 ನಿಮಿಷಗಳ ಕಾಲ ಫ್ರೀಜರ್‌ನಲ್ಲಿ ಇರಿಸಿ.
- ಉಳಿದ ನಾಲ್ಕು ಬ್ರೆಡ್ಗಳನ್ನು ಒಂದು ತಟ್ಟೆಯಲ್ಲಿ ಪುಡಿ ಮಾಡಿಕೊಳ್ಳಿ, ಮತ್ತೊಂದು ಕಪ್ನಲ್ಲಿ ಮೊಟ್ಟೆ , ಬ್ಲೌಲ್ನಲ್ಲಿ ಮೈದಾಹಿಟ್ಟು ತೆಗೆದುಕೊಳ್ಳಿ.
ಫೀಜರ್ನಲ್ಲಿ ಇಟ್ಟಿದ್ದ ಚಿಕನ್ ಮಿಶ್ರಣವನ್ನು ಉಂಡೆಯಾಗಿ ಅಥವಾ ನಿಮಿಗಿಷ್ಟದ ರೂಪದಲ್ಲಿ ಒಂದು ಆಕಾರ ಮಾಡಿಕೊಳ್ಳಿ.
- ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಬಿಸಿಮಾಡಿಕೊಳ್ಳಿ. ನಂತರ ಸಿದ್ಧಪಡಿಸಿಕೊಂಡಿರುವ ಮೈದಾಹಿಟ್ಟು, ಮೊಟ್ಟೆ, ಬ್ರೆಡ್ ಪುಡಿಗೆ ಅನುಕ್ರಮವಾಗಿ ಅದ್ದಿ ಬಿಸಿಯಾಗಿರುವ ಎಣ್ಣೆಯಲ್ಲಿ ಹಾಕಿ ಗೋಲ್ಡೆನ್ ಬ್ರೌನ್ ಬರುವವರೆಗೂ ಬೇಯಿಸಿ. ನಂತರ ಎಣ್ಣೆಯಿಂದ ಹೊರತೆಗೆದರೆ ರುಚಿಯಾದ ಚಿಕನ್ ಕಟ್ಲೆಟ್ ಸವಿಯಲು ಸಿದ್ಧ.