ಬೇರಕ್ಲಿ: ಗ್ರೀಸ್ ದ್ವೀಪ ಸಮೋಸ್ ಮತ್ತು ಟರ್ಕಿಯ ಪಶ್ಚಿಮ ಕರಾವಳಿ ಪ್ರದೇಶದ ಮಧ್ಯಭಾಗದ ಏಜಿಯನ್ ಸಮುದ್ರದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭೀಕರ ಭೂಕಂಪನದಿಂದ ಧ್ವಂಸವಾದ ಕಟ್ಟಡದ ಅವಶೇಷದ ಅಡಿ 91 ತಾಸು ಸಿಲುಕಿದ್ದ 3 ವರ್ಷದ ಹೆಣ್ಣುಮಗುವೊಂದು ಪವಾಡ ಸದೃಶವಾಗಿ ಬದುಕುಳಿದಿದ್ದು, ಸಂಕಷ್ಟ ಪರಿಹಾರ ಕಾರ್ಯದ ತಂಡ ಬಾಲಕಿಯನ್ನು ರಕ್ಷಿಸಿದೆ.
ಬಾಲಕಿಯ ತಾಯಿಗಾಗಿ ಹುಡುಕಾಟ ಮುಂದುವರಿದಿದೆ. ಈ ಮೊದಲು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 4 ವರ್ಷದ ಹಾಗೂ 14 ವರ್ಷದ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಭೂಕಂಪನ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 102ಕ್ಕೆ ಏರಿಕೆಯಾಗಿದ್ದು, ಒಟ್ಟು 1062 ಜನರು ಗಾಯಗೊಂಡಿದ್ದಾರೆ.