ಈದ್ಗಾ ಮೈದಾನದಲ್ಲಿ ಹನುಮಾನ್​ ಚಾಲೀಸಾ ಪಠಿಸಿದ ನಾಲ್ವರು ಯುವಕರು

Edga 1
Published on

ಮಥುರಾ: ನಿನ್ನೆಯಷ್ಟೇ ಉತ್ತರ ಪ್ರದೇಶದ ಮಥುರಾದ ನಂದಗಾಂವ್​​ನಲ್ಲಿರುವ ನಂದಬಾಬಾ ಮಂದಿರದ ಒಳಗೆ ಹೋಗಿ ಇಬ್ಬರು ಮುಸ್ಲಿಮರು ನಮಾಜ್ ಮಾಡಿದ ಘಟನೆ ನಡೆದಿದ್ದು, ಇಬ್ಬರ ವಿರುದ್ಧ ಪ್ರಕರಣವೂ ದಾಖಲಾಗಿದೆ.

ಅದರ ಬೆನ್ನಲ್ಲೇ ಇಂದು ನಾಲ್ವರು ಹಿಂದು ಯುವಕರು ಉತ್ತರಪ್ರದೇಶದ ಬರ್ಸಾನ್​​ನಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಹನುಮಾನ್​ ಚಾಲೀಸಾ ಪಠಿಸಿದ್ದಾರೆ..ಜೈ ಶ್ರೀರಾಮ್​ ಘೋಷಣೆಯನ್ನೂ ಕೂಗಿದ್ದಾರೆ. ಇದೀಗ ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ. ಸೌರಭ್​, ರಾಘವ್​ ಮಿತ್ತಲ್​, ಖನ್ನಾ ಮತ್ತು ಕೃಷ್ಣಾ ಠಾಕೂರ್​ ಎಂಬ ನಾಲ್ವರು ಈದ್ಗಾ ಮೈದಾನಕ್ಕೆ ತೆರಳಿ ಹನುಮಾನ್​ ಚಾಲೀಸಾ ಪಠಿಸಿದ್ದರು. ಇವರೆಲ್ಲ ಶಾಂತಿ ಕದಡಲು ಪ್ರಯತ್ನಿಸಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿದೆ.

ನಿನ್ನೆ ನಂದಬಾಬಾ ದೇಗುಲದಲ್ಲಿ ನಮಾಜ್ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ, ಕೋಮು ಸೌಹಾರ್ದತೆ ಬೆಳೆಸುವ ದೃಷ್ಟಿಯಿಂದ ನಾವು ಈದ್ಗಾಕ್ಕೆ ಹೋಗಿ ಪ್ರಾರ್ಥನೆ ಮಾಡಿದ್ದೇವೆ ಎಂದು ಯುವಕರು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net