ರೇಷನ್​ ಕಾರ್ಡ್​​​ಗೆ ಆಧಾರ್​ ಜೋಡಣೆ (ಇ-ಕೆವೈಸಿ) 
ನ್ಯೂಸ್

ನ.30ರವರೆಗೆ ಇಕೆವೈಸಿ ಅವಧಿ ವಿಸ್ತರಣೆ: 4ನೇ ಬಾರಿ ಗಡುವು ವಿಸ್ತರಿಸಿದ ಆಹಾರ ಇಲಾಖೆ - e-KYC deadline extended

ಪಡಿತರ ಚೀಟಿಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಲು ಕಾರ್ಡ್‌ದಾರರಿಗೆ ಮಗದೊಮ್ಮೆ ಗಡುವು ಕೊಟ್ಟಿರುವ ಆಹಾರ ಇಲಾಖೆ, ಇ-ಕೆವೈಸಿ ಅವಧಿಯನ್ನು ನ.30ರವರೆಗೆ ವಿಸ್ತರಿಸಿದೆ.

ಬೆಂಗಳೂರು: (e-KYC deadline extended) ಪಡಿತರ ಚೀಟಿಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಲು ಕಾರ್ಡ್‌ದಾರರಿಗೆ ಮಗದೊಮ್ಮೆ ಗಡುವು ಕೊಟ್ಟಿರುವ ಆಹಾರ ಇಲಾಖೆ, ಇ-ಕೆವೈಸಿ ಅವಧಿಯನ್ನು ನ.30ರವರೆಗೆ ವಿಸ್ತರಿಸಿದೆ.

ಬೋಗಸ್ ಕಾರ್ಡ್ ಪತ್ತೆ ಮತ್ತು ಪಡಿತರ ಸೋರಿಕೆ ತಡೆಗೆ ಇಲಾಖೆ, ನ.10ರವರೊಳಗೆ ಇ-ಕೆವೈಸಿ ಮಾಡಿಸಬೇಕೆಂದು ಗಡುವು ನೀಡಿತ್ತು. ಸರ್ವರ್ ಸಮಸ್ಯೆಯಿಂದ ಕಾರ್ಡ್‌ದಾರರು ಪರದಾಡುತ್ತಿದ್ದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಇ-ಕೆವೈಸಿ ಅವಧಿಯನ್ನು 4 ಬಾರಿ ವಿಸ್ತರಿಸಲಾಗಿದೆ.

ಕಾರ್ಡ್‌ದಾರರ ಅನುಕೂಲಕ್ಕಾಗಿ ಇಲಾಖೆ, ‘ಅನ್ನಸೇವೆ’ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಯುಐಡಿಎಐ ಫೇಸ್ ಆಥಂಟಿಕೇಷನ್ ತಂತ್ರಜ್ಞಾನ ಬಳಸಿ ಮನೆಯಲ್ಲಿಯೇ ಇ-ಕೆವೈಸಿ ಪೂರ್ಣಗೊಳಿಸಬಹುದು. ‘ಅನ್ನ ಸೇವೆ’ ಆ್ಯಪ್ ಬಳಸುವ ಮುನ್ನ ಫಲಾನುಭವಿಗಳು ಸಿಇಜಿ ಫೇಸ್ ಕೆವೈಸಿ ಆ್ಯಪ್, ಆಧಾರ್‌ ಫೇಸ್‌ಆರ್‌ಡಿ ಮತ್ತು ಅನ್ನಸೇವೆ ಎಂಬ 3 ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇಲ್ಲವಾದರೆ, ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಮಾಡಿಸಬಹುದು.

2,67,64,276 ಬಿಪಿಎಲ್ ಸದಸ್ಯರು ಇ-ಕೆವೈಸಿ ಮಾಡಿಸಬೇಕಿತ್ತು. ಈವರೆಗೆ 2,36,30,747 ಲಾನುಭವಿಗಳು ಇ-ಕೆವೈಸಿ ಮಾಡಿಸಿದ್ದಾರೆ. ಉಳಿದವರು ಇ-ಕೆವೈಸಿ ಮಾಡಿಸಬೇಕಿದೆ. ಇಲ್ಲವಾದಲ್ಲಿ ನಿಯಮಾನುಸಾರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಇಲಾಖೆ ಎಚ್ಚರಿಕೆ ಕೊಟ್ಟಿದೆ.