ನ್ಯೂಸ್

ಶಾಸಕ ಮನೆ ಮುಂದೆ ಪತ್ನಿ ಪ್ರತಿಭಟನೆ! ಕಾರಣ ಇದೇ ನೋಡಿ..

ಹೈದರಾಬಾದ್​: ಆಂಧ್ರದ ವೈಎಸ್​ಆರ್​ ಕಾಂಗ್ರೆಸ್​ ಎಂಎಲ್ಸಿ ದುವ್ವಾಡ ಶ್ರೀನಿವಾಸ್ ಅವರ ಪತ್ನಿ ವಾಣಿ ಆರಂಭಿಸಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.

ವಾಣಿ ಮತ್ತು ಹಿರಿಯ ಪುತ್ರಿ ಹೈಂದವಿ ಶ್ರೀಕಾಕುಳಂ ಜಿಲ್ಲೆಯ ತೆಕ್ಕಲಿಯ ಮನೆ ಹೊರಗೆ ಕಾರ್ ಶೆಡ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಶಾಸಕನ ಬಂಧನಕ್ಕೆ ಪಟ್ಟುಹಿಡಿದಿದ್ದಾರೆ.

ತನ್ನ ಪತಿ ವೈಎಸ್​ಆರ್​ ಕಾಂಗ್ರೆಸ್​ನ ಕಾರ್ಯಕರ್ತೆ ದಿವ್ವಳ ಮಾಧುರಿ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ವಾಣಿ ಆರೋಪಿಸಿದ್ದಾರೆ.

ಸಮಸ್ಯೆ ಬಗೆಹರಿಸಲು ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ಆದರೆ ದುವ್ವಾಡ ಶ್ರೀನಿವಾಸ್ ಮತ್ತು ವಾಣಿ ಈಗಾಗಲೇ ತೆಕ್ಕಲಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಆಂಧ್ರದಲ್ಲಿ ಸಂಚಲನ ಮೂಡಿಸಿದೆ.