ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಅತ್ಯಂತ ದೊಡ್ಡ ಹಬ್ಬ. ಆದರೆ ಈ ಬಾರಿ ಕೊವಿಡ್-19 ಇರುವುದರಿಂದ ಹಬ್ಬದ ಅದ್ದೂರಿ ಆಚರಣೆಗೆ ಕಡಿವಾಣ ಬೀಳುವ ಎಲ್ಲ ಸಾಧ್ಯತೆಗಳೂ ಇವೆ.
ಹೀಗಿರುವಾಗ ಕೋಲ್ಕತ್ತದ ದುರ್ಗಾ ಪೂಜಾ ಕ್ಲಬ್ ದುರ್ಗಾ ದೇವಿಯ ದೊಡ್ಡ ಮೂರ್ತಿಯನ್ನು ಅನಾವರಣಗೊಳಿಸಿದೆ. ಇದೊಂದು ವಿಭಿನ್ನ ಪ್ರತಿಮೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಕೊವಿಡ್-19 ಬಗ್ಗೆ ಅರಿವು ಮೂಡಿಸುವ ಸಲುವಾಗಿ ದುರ್ಗಾ ಮಾತಾ ಮೂರ್ತಿಗೆ ಬೆಳ್ಳಿಯ ಮಾಸ್ಕ್ ತೊಡಿಸಲಾಗಿದ್ದು, ಇದರ ತೂಕ ಸುಮಾರು 4 ಗ್ರಾಂ. ಹಾಗೇ ದೇವಿಯ 10 ಕೈಯಿಗಳಲ್ಲೂ ಸ್ಯಾನಿಟೈಸರ್ ಬಾಟಲಿಯನ್ನೂ ಇಡಲಾಗಿದೆ. ಇದನ್ನೂ ಓದಿ:ಮತ್ತೆ ನ್ಯೂಕ್ಲಿಯರ್ ದಾಳಿಯ ಗೊಡ್ಡು ಬೆದರಿಕೆಯನ್ನೊಡ್ಡಿದ ಪಾಕಿಸ್ತಾನ; ಅವರ ಅಸ್ತ್ರ ಪರ್ಫೆಕ್ಟ್ ಇದ್ಯಂತೆ !
ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ 27,299 ಸಕ್ರಿಯ ಕರೊನಾ ಪ್ರಕರಣಗಳು ಇವೆ. ಇದೇ ಕಾರಣಕ್ಕೆ ಅಲ್ಲಿ ದುರ್ಗಾ ಪೂಜೆ ಆಚರಣೆಗಳೂ ವಿಳಂಬವಾಗುತ್ತಿದೆ. ಇದೆಲ್ಲದರ ಮಧ್ಯೆ ಈ ವಿಭಿನ್ನ ದುರ್ಗಾ ದೇವಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.(ಏಜೆನ್ಸೀಸ್)