ನ್ಯೂಸ್

ಆರ್ಥಿಕ ಒತ್ತಡ; ಕುಟುಂಬದವರಿಗೆ ವಿಷ ಉಣಿಸಿ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ!

ರಾಜಸ್ಥಾನ: ವ್ಯಕ್ತಿಯೊಬ್ಬ ತೀವ್ರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದ ಹಿನ್ನೆಲೆ ಕುಟುಂಬದವರಿಗೆ ವಿಷ ಉಣಿಸಿ ಹತ್ಯೆಗೈದು, ನಂತರದಲ್ಲಿ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ.

ಹಣಕಾಸಿನ ಬಿಕ್ಕಟ್ಟಿನಿಂದ ಮನನೊಂದ ವ್ಯಕ್ತಿ, ಪತ್ನಿ ಮತ್ತು ಮಕ್ಕಳಿಗೆ ಸ್ವೀಟ್​ನೊಳಗೆ ವಿಷ ಬೆರೆಸಿ, ಉಣಿಸಿದ್ದಾರೆ. ನಂತರದಲ್ಲಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯನ್ನು ಪ್ರತಾಪ್ ನಗರ ಪ್ರದೇಶದ ನಿವಾಸಿ ಮನೋಜ್ ಶರ್ಮಾ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಮನೋಜ್​ ಶರ್ಮಾ ಹಲ್ವಾದಲ್ಲಿ ವಿಷಕಾರಿ ಪದಾರ್ಥವನ್ನು ಬೆರೆಸಿದ್ದಾರೆ. ಇದನ್ನು ಸೇವಿಸಿದ ಆತನ ಪತ್ನಿ ಸಾಕ್ಷಿ (28) ಮತ್ತು 5 ತಿಂಗಳ ಮಗ ಅಥರ್ವ್​​ ಮೃತಪಟ್ಟಿದ್ದಾರೆ. ಶರ್ಮಾ ಮತ್ತು ಅವರ ಮಗಳು ನಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ (SHO) ತಿಳಿಸಿದ್ದಾರೆ,(ಏಜೆನ್ಸೀಸ್).