ನ್ಯೂಸ್

VIDEO| ನಾಯಿಯ ಮುಂದೆ ಸತ್ತಂತೆ ನಟಿಸಿ ಎಸ್ಕೇಪ್​ ಆದ ಬಾತುಕೋಳಿ: ಈ ವೈರಲ್​ ವಿಡಿಯೋ ಮಿಸ್​ ಮಾಡ್ಕೋಬೇಡಿ!

ನವದೆಹಲಿ: ತನ್ನತ್ತಾ ಬಂದ ಶ್ವಾನದ ಮುಂದೆ ಸತ್ತಂತೆ ನಟಿಸಿ, ಅದರ ಗಮನವನ್ನು ಬೇರೆಡೆಗೆ ಸೆಳೆದು ಬಾತುಕೋಳಿಯೊಂದು ಪರಾರಿಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಭಾರತೀಯ ಅರಣ್ಯಾಧಿಕಾರಿ ಸುಸಾಂತ್​ ನಂದ ಅವರು ಟ್ವಿಟರ್​ನಲ್ಲಿ ವಿಡಿಯೋ ಶೇರ್​​ ಮಾಡಿಕೊಂಡಿದ್ದು, 14 ಸೆಕೆಂಡಿನ ವಿಡಿಯೋ ನೆಟ್ಟಿಗರು ಮನಸ್ಸನ್ನು ಸೆಳೆದಿದೆ.

ವಿಡಿಯೋದಲ್ಲಿ ಏನಿದೆ?: ತನ್ನ ಮುಂದೆ ದೈತ್ಯಾಕಾರದಲ್ಲಿ ನಿಂತಿರುವ ಶ್ವಾನದಿಂದ ಬಚಾವ್​ ಆಗಲು ಕಣ್ಣು ಮುಚ್ಚಿಕೊಂಡು ಬಾತುಕೋಳಿ ನೆಲದ ಮೇಲೆ ಸತ್ತಂತೆ ಬಿದ್ದಿರುತ್ತದೆ. ಕ್ಷಣವೊತ್ತು ನಾಯಿ ಅತ್ತಿಂದಿತ್ತ ನೋಡಿ ನೆಲದ ಮೇಲೆ ಬಿದ್ದಿರುವ ಬಾತುಕೋಳಿಯನ್ನು ನೋಡಿ ಏನೂ ತೋಚದೆ ಸ್ಥಳದಿಂದ ಕಾಲ್ಕಿಳುತ್ತದೆ. ತಕ್ಷಣ ಬಾತುಕೋಳಿ ಎದ್ದು ಬದುಕಿತು ಬಡಜೀವ ಎಂದು ನಿಟ್ಟುಸಿರುವ ಬಿಟ್ಟಂತೆ ಓಡಿಹೋಗುತ್ತದೆ.

ನಟನೆಯೆಂದರೆ ಪ್ರಾಮಾಣಿಕವಾಗಿ ನಕಲಿ ಮಾಡುವುದಲ್ಲ, ಬಾತುಕೋಳಿ ಶ್ವಾನದಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಟಿಸಿತು ಎಂದು ಟ್ವಿಟರ್​ನಲ್ಲಿ ಸುಸಾಂತ್​ ನಂದ ಅವರು ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.

ವೈರಲ್​ ಆಗಿರುವ ವಿಡಿಯೋವನ್ನು ಈಗಾಗಲೇ 9 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಬಾತುಕೋಳಿಯ ನಟನೆಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಬಾತುಕೋಳಿ ಆಸ್ಕರ್​ ಪ್ರಶಸ್ತಿಗೆ ಅರ್ಹವೆಂದು ಕಮೆಂಟಿಸಿದ್ದಾರೆ. (ಏಜೆನ್ಸೀಸ್​)