More

    VIDEO| ಹೆಬ್ಬಾವು-ಚಿರತೆ ನಡುವಿನ ಭೀಕರ ಕಾದಾಟದಲ್ಲಿ ಕೊನೆಯಲ್ಲಿ ಗೆದ್ದಿದ್ದು ಯಾರಿರಬಹುದು?

    ನವದೆಹಲಿ: ಒಂದೆಡೆ ಕರೊನಾ ವೈರಸ್​ ಲಾಕ್​ಡೌನ್​ನಿಂದ ಮಾನವನ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರೆ, ಇನ್ನೊಂದೆಡೆ ಇದ್ಯಾವುದರ ಪರಿವೆಯಿಲ್ಲದೇ ಪ್ರಾಣಿಗಳು ಮಾತ್ರ ಸ್ವತಂತ್ರವಾಗಿವೆ. ವಾಹನಗಳ ಸಂಚಾರಗಳ ತೊಂದರೆಯಿಲ್ಲದೆ, ನಿಶ್ಯಬ್ಧವಾಗಿರುವ ಕಾಡಿನಲ್ಲಿ ಪ್ರಾಣಿಗಳು ಸ್ವಚ್ಛಂದವಾಗಿ ಓಡಾಡುತ್ತಾ, ಕಾದಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿವೆ.

    ಇದೆಲ್ಲದರ ನಡುವೆ ಹೆಬ್ಬಾವು ಮತ್ತು ಚಿರತೆಯ ನಡುವೆ ನಡೆದ ಭಯಾನಕ ಕಾಳಗದ ವಿಡಿಯೋವೊಂದು ಸಾಮಾಜಿಕ ಜಾಲತಾಣವಲ್ಲಿ ಮಿಂಚಿನ ವೇಗದಷ್ಟೇ ವೈರಲ್​ ಆಗಿದೆ. 46 ಸೆಕೆಂಡಿನ ವಿಡಿಯೋ ಕ್ಲಿಪ್​ ಅನ್ನು ಭಾರತೀಯ ಅರಣ್ಯಾಧಿಕಾರಿ ಸುಸಾಂತ್​ ನಂದ ಅವರು ಭಾನುವಾರ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಅರಣ್ಯದಲ್ಲಿ ಎದುರು-ಬದರಾದ ಚಿರತೆ ಮತ್ತು ಹೆಬ್ಬಾವು ಕ್ಷಣವೊತ್ತು ಒಂದನ್ನೊಂದು ದಿಟ್ಟಿಸಿ ನೋಡುತ್ತವೆ. ಈ ವೇಳೆ ಎಂದಿನಂತೆಯೇ ಹೆಬ್ಬಾವು ಚಿರತೆಯನ್ನು ತನ್ನ ದವಡೆಗೆ ಸಿಲುಕಿಸಲು ಯತ್ನಿಸುತ್ತದೆ. ಬಳಿಕ ಚಿರತೆ ನಾನಾ-ನೀನಾ ನೋಡೇ ಬಿಡೋಣ ಎಂದು ಅಖಾಡಕ್ಕೆ ಇಳಿಯುತ್ತದೆ. ಇಬ್ಬರ ನಡುವೆ ಭೀಕರವಾದ ಕಾಳಗವೊಂದು ನಡೆದೇ ಬಿಡುತ್ತದೆ. ಕೊನೆಯಲ್ಲಿ ಹೆಬ್ಬಾವಿನ ಹುಟ್ಟಡಗಿಸುವ ಚಿರತೆ ಅದನ್ನು ಕೊಲ್ಲುತ್ತದೆ.

    ಚಿರತೆ ಮತ್ತು ಹೆಬ್ಬಾವು ಪರಸ್ಪರ ಕಿತ್ತಾಡುತ್ತಿವೆ. ಹೆಬ್ಬಾವು ನಿರ್ಬಂಧಿಸಲು ಯತ್ನಿಸಿದಷ್ಟು ಚಿರತೆ ತನ್ನ ಜಾಣತನದಿಂದ ಎಸ್ಕೇಪ್​ ಆಗಿ, ಕೊನೆಯಲ್ಲಿ ಹೆಬ್ಬಾವನ್ನು ವಶಪಡಿಸಿಕೊಂಡು ಕೊಲ್ಲುತ್ತದೆ. ಇದು ಸಾಮಾನ್ಯವೇನಲ್ಲ. ಚಿರತೆಗೆ ಬೇಟೆಯಾಗುವ ಮೂಲಕ ಹೆಬ್ಬಾವಿನ ಜೀವನ ಕೊನೆಯಾಗುತ್ತದೆ ಎಂದು ಸುಸಾಂತ್​ ನಂದಾ ಅವರು ಟ್ವಿಟರ್​ನಲ್ಲಿ ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.

    ನಿನ್ನೆಯಷ್ಟೇ ಅಪ್​ಲೋಡ್​ ಮಾಡಿರುವ ವಿಡಿಯೋವನ್ನು ಈಗಾಗಲೇ 3 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ಅದ್ಭುತವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಗಳ ಸುರಿಮಳೆಗೈದಿದ್ದಾರೆ. (ಏಜೆನ್ಸೀಸ್​)

    ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಲಾಕ್​ಡೌನ್​ನಿಂದಾಗಿ ಜನರು ಸಾಯಲಿದ್ದಾರೆ: ಪಾಕ್​ ಪ್ರಧಾನಿ ಎಚ್ಚರಿಕೆ ನೀಡಿದ್ದೇಕೆ?

    ಲಾಕ್‌ಡೌನ್‌ ಕುರಿತು ದೇಶವನ್ನುದ್ದೇಶಿಸಿ ನಾಳೆ ಪ್ರಧಾನಿ ಭಾಷಣ: ಬೆಳಗ್ಗೆ 10 ಗಂಟೆಗೆ ಜನರ ಪ್ರಶ್ನೆಗಳಿಗೆ ಬೀಳಲಿದೆ ತೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts