More

    ಲಾಕ್‌ಡೌನ್‌ ಕುರಿತು ದೇಶವನ್ನುದ್ದೇಶಿಸಿ ನಾಳೆ ಪ್ರಧಾನಿ ಭಾಷಣ: ಬೆಳಗ್ಗೆ 10 ಗಂಟೆಗೆ ಜನರ ಪ್ರಶ್ನೆಗಳಿಗೆ ಬೀಳಲಿದೆ ತೆರೆ

    ನವದೆಹಲಿ: ಲಾಕ್‌ಡೌನ್‌ ಅವಧಿಯ ವಿಸ್ತರಣೆ ಮಾಡಬೇಕೇ, ಬೇಡವೇ ಎಂಬ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ.14) ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತು ಪ್ರಧಾನಿ ಕಾರ್ಯಾಲಯದ ಟ್ವಿಟರ್‌ ತಿಳಿಸಿದೆ.

    ನಾಳೆ ಮುಗಿಯಬೇಕಿರುವ ಲಾಕ್‌ಡೌನ್‌ ಅವಧಿಯನ್ನು ಈಗಾಗಲೇ ಕರ್ನಾಟಕ, ಒಡಿಶಾ ಹಾಗೂ ಪಂಜಾಬ್‌ ರಾಜ್ಯಗಳು ಏಪ್ರಿಲ್‌ 30ರವರೆಗೆ ಮುಂದುವರೆಸಿವೆ. ಆದರೆ ಲಾಕ್‌ಡೌನ್ ಅವಧಿ ವಿಸ್ತರಣೆ ಕುರಿತು ಇದುವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಹೊರಬಂದಿಲ್ಲ. ಜತೆಗೆ, ಆದರೆ ಉಳಿದ ರಾಜ್ಯಗಳು ಕೇಂದ್ರದ ಆದೇಶಕ್ಕಾಗಿ ಕಾಯುತ್ತಲಿದೆ. ಆದ್ದರಿಂದ ಎಲ್ಲಾ ರಾಜ್ಯಗಳ ಲಾಕ್‌ಡೌನ್‌ ಭವಿಷ್ಯಕ್ಕೆ ನಾಳೆ ತೆರೆ ಬೀಳಲಿದೆ.

    ಈಗಾಗಲೇ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ದೂರವಾಣಿ ಕರೆ ಮತ್ತು ವೀಡಿಯೋ ಕಾನ್ಫರೆನ್ಸ್‌ ಮೂಲಕ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ವಿವಿಧ ಕ್ಷೇತ್ರಗಳ ತಜ್ಞರು, ವಿವಿಧ ಪಕ್ಷಗಳ ಮುಖಂಡರ ಜತೆಗೂ ದೀರ್ಘ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಬಂದಿರುವ ಅಭಿಪ್ರಾಯಗಳ ಆಧಾರದ ಮೇಲೆ ಲಾಕ್‌ಡೌನ್‌ ಕುರಿತು ನಾಳೆ ಪ್ರಧಾನಿ ನುಡಿಯಲಿದ್ದಾರೆ.

    ಸದ್ಯ ಭಾರತದಲ್ಲಿ ಇರುವ ಪರಿಸ್ಥಿತಿಯನ್ನು ಪರಿಗಣಿಸಿದರೆ, ಲಾಕ್‌ಡೌನ್‌ ಅವಧಿಯನ್ನು ಎಲ್ಲಾ ರಾಜ್ಯಗಳಲ್ಲಿಯೂ ವಿಸ್ತರಿಸುವ ಸಾಧ್ಯತೆ ಇದೆ ಎನ್ನುವುದೇ ಬಹುತೇಕರ ಅಭಿಪ್ರಾಯವಾಗಿದೆ. ಇಲ್ಲಿಯವರೆಗೆ ಭಾರತದಲ್ಲಿ 9152 ಕರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು 308 ಮಂದಿ ಮೃತಪಟ್ಟಿದ್ದಾರೆ. 857 ಮಂದಿ ಗುಣಮುಖರಾಗಿದ್ದಾರೆ. ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗಾಗಲೇ ಕೆಲವೊಂದು ಪ್ರದೇಶಗಳಲ್ಲಿ ಲಾಕ್‌ಡೌನ್‌ ಮುಂದಿನ ಹಂತವಾದ ಸೀಲ್‌ಡೌನ್‌ ಕೂಡ ಮಾಡಲಾಗಿದೆ.

    ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡರೆ ಲಾಕ್‌ಡೌನ್‌ ಅವಧಿ ದೇಶಾದ್ಯಂತ ಮುಂದುವರೆಯುವುದು ಬಹುತೇಕ ಖಚಿತವಾಗಿದೆ. ಆದರೆ ಸಂಪೂರ್ಣವಾಗಿ ಲಾಕ್‌ಡೌನ್‌ ಇರಲಿದೆಯೆ ಅಥವಾ ಕೆಲವೊಂದು ಕ್ಷೇತ್ರಗಳಿಗೆ ಇದರಿಂದ ವಿನಾಯಿತಿ ನೀಡಲಾಗುವುದೆ ಎಂಬಿತ್ಯಾದಿ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಇದ್ದು, ಅವುಗಳಿಗೆಲ್ಲಾ ನಾಳೆ ತೆರೆ ಬೀಳಲಿದೆ. (ಏಜನ್ಸೀಸ್‌)

    ದೆಹಲಿಯಲ್ಲಿ ಎರಡನೇ ದಿನವೂ ಲಘುವಾಗಿ ನಡುಗಿದ ಭೂಮಿ, 2.7 ತೀವ್ರತೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts