More

    ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಲಾಕ್​ಡೌನ್​ನಿಂದಾಗಿ ಜನರು ಸಾಯಲಿದ್ದಾರೆ: ಪಾಕ್​ ಪ್ರಧಾನಿ ಎಚ್ಚರಿಕೆ ನೀಡಿದ್ದೇಕೆ?

    ಇಸ್ಲಾಮಾಬಾದ್​: ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೆಚ್ಚಿನ ಜನರು ಕರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ಹಸಿವಿನಿಂದ ತತ್ತರಿಸಲಿದ್ದು, ಇದರಿಂದ ರೋಗಕ್ಕೀಡಾಗಿ ಸಾಯಲಿದ್ದಾರೆ. ಹೀಗಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಸಾಲಗಳನ್ನು ಮನ್ನಾ ಮಾಡಬೇಕೆಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮನವಿ ಮಾಡಿದ್ದಾರೆ.

    ಅಂತಾರಾಷ್ಟ್ರೀಯ ಪಾಲುದಾರರಿಗೆ ಮನವಿ ಮಾಡಿರುವ ಪಾಕಿಸ್ತಾನ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ತಕ್ಷಣವೇ ಸಾಲ ಪರಿಹಾರವನ್ನು ನೀಡಿ, ಕರೊನಾ ವೈರಸ್​ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಲಿದೆ ಎಂದು ಇಮ್ರಾನ್​ ಖಾನ್​ ವಿಡಿಯೋ ಸಂದೇಶದ ಮೂಲಕ ಕೋರಿದ್ದಾರೆ.

    ಕರೊನಾ ತಡೆಗಟ್ಟಲು ದೇಶದಲ್ಲಿ ಹೇರಲಾಗಿರುವ ಲಾಕ್​ಡೌನ್​ನಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದ ನಿರುದ್ಯೋಗ ಹೆಚ್ಚಾಗುತ್ತಿದೆ. ಇದು ಜನರನ್ನು ಚಿಂತೆಗೀಡು ಮಾಡಿದ್ದು, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜನರು ಲಾಕ್​ಡೌನ್​ನಿಂದ ಸಾಯಲಿದ್ದಾರೆ ಎಂದು ಇಮ್ರಾನ್​ ಎಚ್ಚರಿಸಿದ್ದಾರೆ.

    ಪಾಕಿಸ್ತಾನದಲ್ಲಿ 220 ಮಿಲಿಯನ್​ ಜನಸಂಖ್ಯೆ ಇದೆ. ಈವರೆಗೂ ಕರೊನಾ ವಿರುದ್ಧ ಹೋರಾಡಲು 8 ಬಿಲಿಯನ್​ ಡಾಲರ್​(800 ಕೋಟಿ ಡಾಲರ್​) ವಿಶೇಷ ಪ್ಯಾಕೇಜ್​ ನೀಡಲಾಗಿದೆ. ತುಂಬಾ ಸಾಲಾ ಮಾಡಿದ ರಾಷ್ಟ್ರಗಳು ಆರೋಗ್ಯ ಮತ್ತು ಸಾಮಾಜಿಕ ಬೆಂಬಲಕ್ಕೆ ಹೆಚ್ಚಿನ ಹಣ ವ್ಯಯಿಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

    ಪಾಕಿಸ್ತಾನ 100 ಬಿಲಿಯನ್​ ಡಾಲರ್​ಗಿಂತಲೂ ಹೆಚ್ಚು ವಿದೇಶಿ ಸಾಲವನ್ನು ಪಡೆದಿದೆ. ಅದನ್ನ ಬಜೆಟ್​ನಲ್ಲಿ ಸೇರಿಸಿ ಕಳೆದ ವಾರ ನಗದು ವಿತರಣಾ ಕಾರ್ಯಕ್ರಮ ಅಡಿಯಲ್ಲಿ 12 ಮಿಲಿಯನ್​ ಬಡ ಕುಟುಂಬಗಳಿಗೆ 900 ಮಿಲಿಯನ್​ ಡಾಲರ್​ ವಿತರಿಸಲಾಗಿದೆ. ಲಾಕ್​ಡೌನ್​ನಿಂದ ಉಂಟಾಗಿರುವ ನಿರುದ್ಯೋಗದಿಂದ ಬಳಲುತ್ತಿರುವ ಬಡ ಕುಟುಂಬಗಳಿಗೆ ಹಣ ವಿತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಕರೊನಾ ವೈರಸ್​ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಸಾಲ ಪರಿಹಾರವನ್ನು ಘೋಷಿಸಬೇಕೆಂದು ವಿಶ್ವದ ಪ್ರಮುಖ ನಾಯಕರಲ್ಲಿ ಮನವಿ ಮಾಡಿದ್ದಾರೆ.

    ಕರೊನಾ ವಿರುದ್ಧ ಹೋರಾಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಪಾಕಿಸ್ತಾನ 1.4 ಬಿಲಿಯನ್​ ಡಾಲರ್​ ಪಡೆದುಕೊಳ್ಳಲಿದೆ. ಇದರೊಂದಿಗೆ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಸಾಲ ಮನ್ನಾ ಮಾಡುವಂತೆಯೂ ಇಮ್ರಾನ್​ ಖಾನ್​ ಕೇಳಿಕೊಂಡಿದ್ದಾರೆ.

    ಪಾಕಿಸ್ತಾನದಲ್ಲೂ ಕರೊನಾ ಕರಿಛಾಯೆ ಆವರಿಸಿದ್ದು, ಈವರೆಗೂ 5 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದು, 88 ಮಂದಿ ಸಾವಿಗೀಡಾಗಿದ್ದಾರೆ. ಪಾಕ್​ನಲ್ಲೂ ಕೂಡ ರಾಷ್ಟ್ರವ್ಯಾಪಿ ಲಾಕ್​ಡೌನ್​ ಹೇರಲಾಗಿದೆ. (ಏಜೆನ್ಸೀಸ್​)

    ಲಾಕ್‌ಡೌನ್‌ ಕುರಿತು ದೇಶವನ್ನುದ್ದೇಶಿಸಿ ನಾಳೆ ಪ್ರಧಾನಿ ಭಾಷಣ: ಬೆಳಗ್ಗೆ 10 ಗಂಟೆಗೆ ಜನರ ಪ್ರಶ್ನೆಗಳಿಗೆ ಬೀಳಲಿದೆ ತೆರೆ

    ದೆಹಲಿಯಲ್ಲಿ ಎರಡನೇ ದಿನವೂ ಲಘುವಾಗಿ ನಡುಗಿದ ಭೂಮಿ, 2.7 ತೀವ್ರತೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts