ನ್ಯೂಸ್

ದುಬೆ ಜೀವ ಉಳಿಸಲು ನಿನ್ನೆಯೇ ಕೋರ್ಟ್‌ಗೆ ಸಲ್ಲಿಸಲಾಗಿತ್ತು ಅರ್ಜಿ!

ನವದೆಹಲಿ: ಇಂದು ಬೆಳಗ್ಗೆ ಎನ್‌ಕೌಂಟರ್‌ನಲ್ಲಿ ಹತನಾದ ಕುಖ್ಯಾತ ರೌಡಿ ವಿಕಾಸ್‌ ದುಬೆಯ ಜೀವ ಉಳಿಸಲು ನಿನ್ನೆಯೇ ಸುಪ್ರೀಂಕೋರ್ಟ್‌ ಅರ್ಜಿಯೊಂದು ಸಲ್ಲಿಕೆಯಾಗಿತ್ತು.

‌ನಿನ್ನೆ ಕಾನ್ಪುರದ ಮಹಾಕಾಲ ದೇವಾಲಯದಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆಯುತ್ತಲೇ, ಈತನ ಎನ್‌ಕೌಂಟರ್‌ ಆಗುವ ಸಾಧ್ಯತೆಯನ್ನು ಮೊದಲೇ ಅರಿತಿದ್ದ ಕೆಲವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

‘ದುಬೆಯವರ ಎನ್‌ಕೌಂಟರ್‌ ಆಗುವ ಸಾಧ್ಯತೆ ಇದೆ. ಆದ್ದರಿಂದ ದಯವಿಟ್ಟು ಅವರನ್ನು ಸಾಯಿಸಬಾರದು ಎಂದು ಪೊಲೀಸರಿಗೆ ನಿರ್ದೇಶಿಸಿ’ ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಕೂಡಲೇ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಗೊಳ್ಳುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.

ನಿನ್ನೆ ಸಂಜೆ ಈ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ ಅಂದರೆ ಇಂದು (ಶುಕ್ರವಾರ) ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ಅರ್ಜಿದಾರರು ಕೋರಿಕೊಂಡಿದ್ದರು.
ಆದರೆ ಈ ಅರ್ಜಿ ವಿಚಾರಣೆಗೆ ಬರುವ ಮುನ್ನವೇ ತಪ್ಪಿಸಿಕೊಳ್ಳಲು ಹೋದ ದುಬೆ ಪೊಲೀಸರ ಎನ್‌ಕೌಂಟರ್‌ಗೆ ಹತನಾಗಿದ್ದಾನೆ.