ಬಿಸಿಲು ವಾತಾವರಣ  
ನ್ಯೂಸ್

ರಾಜ್ಯಾದ್ಯಂತ ಒಣಹವೆ: ವಾಡಿಕೆಕ್ಕಿಂತ 4-5 ಡಿ.ಸೆ. ಅಧಿಕ- Dry weather

ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಉತ್ತರ ಕರ್ನಾಟಕ ಸೇರಿ ರಾಜ್ಯಾದ್ಯಂತ ಒಣಹವೆ ಶುರುವಾಗಿದ್ದು, ಇದರ ಬೆನ್ನಲ್ಲೇ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಮುಂದಿನ 2-3 ದಿನಗಳಲ್ಲಿ ಉಳಿದ ಜಿಲ್ಲೆಗಳಲ್ಲೂ ವಾಪಸ್ ಪಡೆಯಲಾಗುತ್ತದೆ. ಅ.16ರಿಂದ ಈಶಾನ್ಯ ಮಾನ್ಸೂನ್( ಹಿಂಗಾರು) ಶುರುವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು: (Dry weather) ಪ್ರಸಕ್ತ ಸಾಲಿನ ಮುಂಗಾರು ಕೊನೆಗೊಳ್ಳುತ್ತಿರುವ ನಡುವೆಯೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಕ್ಕಿಂತ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ.

ಕಲಬುರಗಿ, ಗದಗ, ಬೆಳಗಾವಿ, ಬೀದರ್, ಚಿತ್ರದುರ್ಗ, ವಿಜಯಪುರ, ರಾಯಚೂರು ಮತ್ತು ಕಾರವಾರದಲ್ಲಿ ಶನಿವಾರ ವಾಡಿಕೆಕ್ಕಿಂತ 4-5 ಡಿ.ಸೆ.ಅಧಿಕವಾಗಿದೆ. ಬೆಂಗಳೂರು ನಗರ, ಮೈಸೂರು, ಮಂಗಳೂರು ಮತ್ತು ಹೊನ್ನಾವರದಲ್ಲಿ ವಾಡಿಕೆಕ್ಕಿಂತ 2 ಡಿ.ಸೆ. ಹೆಚ್ಚಾಗಿದೆ. ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಮಾತ್ರವಲ್ಲದೆ ಕನಿಷ್ಠ ತಾಪಮಾನದಲ್ಲೂ ಉಷ್ಣಾಂಶ ಹೆಚ್ಚಾಗುತ್ತಿದೆ. ಇದರಿಂದ ಬೆಳಗ್ಗೆಯಿಂದಲೇ ಬಿಸಿಲಿನ ಬಿಸಿ ಜನರಿಗೆ ಕಾಡುತ್ತಿದೆ.

ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಉತ್ತರ ಕರ್ನಾಟಕ ಸೇರಿ ರಾಜ್ಯಾದ್ಯಂತ ಒಣಹವೆ ಶುರುವಾಗಿದ್ದು, ಇದರ ಬೆನ್ನಲ್ಲೇ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಪ್ರಸ್ತುತ ಉ.ಕರ್ನಾಟಕದಲ್ಲಿ ಮಾನ್ಸೂನ್ ಹಿಂತೆಗೆದುಕೊಳ್ಳಲಾಗಿದೆ. ಮುಂದಿನ 2-3 ದಿನಗಳಲ್ಲಿ ಉಳಿದ ಜಿಲ್ಲೆಗಳಲ್ಲೂ ವಾಪಸ್ ಪಡೆಯಲಾಗುತ್ತದೆ. ಅ.16ರಿಂದ ಈಶಾನ್ಯ ಮಾನ್ಸೂನ್( ಹಿಂಗಾರು) ಶುರುವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.