ಬಿಲ್​ನಲ್ಲಿ ಕ್ಯಾನ್ಸರ್​​ ​​​ಔಷಧ ಬೆಲೆ ಬೆಲೆ, ಬ್ರಾಂಡ್, ಬ್ಯಾಚ್ ಸಂಖ್ಯೆ ನಮೂದು ಕಡ್ಡಾಯ: ನ.1ರಿಂದ ಎಲ್ಲ ಆಸ್ಪತ್ರೆಗಳಲ್ಲಿ ನಿಯಮ ಜಾರಿ- Mandatory to list cancer drug price

ಆರೋಗ್ಯ ಸಚಿವ
ಯು.ಟಿ.ಖಾದರ್​
Published on: 

ಬೆಂಗಳೂರು: (Mandatory to list cancer drug price, brand, and batch number on bills) ಕ್ಯಾನ್ಸರ್ ಚಿಕಿತ್ಸೆ ಪಡೆಯುವ ರೋಗಿಗಳಿಂದ ಬೇಕಾಬಿಟ್ಟಿ ಹಣ ಸುಲಿಗೆ ಮಾಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಇನ್ನೂಮುಂದೆ ಆಸ್ಪತ್ರೆಗಳ ಬಿಲ್‌ನಲ್ಲಿ ಔಷಧ ಹೆಸರು, ಔಷಧ ಖರೀದಿ ಬೆಲೆ, ಬ್ರಾಂಡ್, ಬ್ಯಾಚ್ ಸಂಖ್ಯೆ, ತಯಾರಿಕೆ ದಿನಾಂಕ ಮತ್ತು ಬಳಕೆ ಅವಧಿಯ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರೋಗಿಗಳಿಗೆ ವಿಧಿಸುವ ಔಷಧ ದರವು ಎಂಆರ್‌ಪಿ ದರ ಮೀರಬಾರದು. ಆಸ್ಪತ್ರೆ ಬಿಲ್‌ನಲ್ಲಿ ಔಷಧಗಳ ಖರೀದಿಯ ಬೆಲೆ ನಮೂದಿಸಬೇಕು. ರಾಜ್ಯದಲ್ಲಿ ನ.1ರಿಂದ ಇದು ಜಾರಿಗೆ ಬರಲಿದೆ. ಎಲ್ಲ ಸರ್ಕಾರಿ, ಖಾಸಗಿ ಮತ್ತು ಟ್ರಸ್ಟ್ ಆಸ್ಪತ್ರೆಗಳಿಗೆ ಅನ್ವಯವಾಗಲಿದೆ. ಆ ಮೂಲಕ ಆಸ್ಪತ್ರೆಗಳಲ್ಲಿ ಔಷಧ, ವೈದ್ಯಕೀಯ ಉಪಕರಣಗಳ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ತರಲು ಸಾಧ್ಯವಾಗಲಿದೆ ಎಂದರು.

Also Read
ಪುಣ್ಯಕೋಟಿ ದತ್ತು ಯೋಜನೆಗೆ ತಕ್ಷಣ ಅನುದಾನ ಬಿಡುಗಡೆ ಮಾಡಿ: ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯ- Release funds for the Punyakoti
ಆರೋಗ್ಯ ಸಚಿವ

ಇತ್ತೀಚಿಗಷ್ಟೇ ಕ್ಯಾನ್ಸರ್ ಔಷಧಗಳ ದರಕ್ಕೆ ಕಡಿವಾಣ ಹಾಕುವಂತೆ ಕೇಂದ್ರಕ್ಕೆ ಪತ್ರ ಬರೆದು ಗಮನ ಸೆಳೆದಿದ್ದೆ. 253 ಔಷಧಗಳನ್ನು ಪಟ್ಟಿ ಮಾಡಿ ದರಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರ ಪ್ರತಿಫಲವಾಗಿ ಸುಪ್ರೀಂಕೋರ್ಟ್ ಅಭಿಪ್ರಾಯದ ಬೆನ್ನಲ್ಲೇ, ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಪ್ರಮುಖ ತೀರ್ಮಾನ ಕೈಗೊಂಡಿದೆ. ಕ್ಯಾನ್ಸರ್ ಔಷಧಗಳ ಮೇಲಿನ ವ್ಯಾಪಾರ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಲಾಗುಉವುದು. ರೋಗಿಗಳ ಕುಟುಂಬಗಳಿಗೆ ದೊಡ್ಡ ಆರ್ಥಿಕ ಪರಿಹಾರ ಸಿಗಲಿದೆ. ಮುಂದಿನ ದಿನಗಳಲ್ಲಿ ಹೃದಯ, ಮೂತ್ರಪಿಂಡದ (ಕಿಡ್ನಿ) ಕಾಯಿಲೆಗಳ ಔಷಧಗಳ ಬೆಲೆ ಇಳಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಸಚಿವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಶ್ರೀನಿವಾಸ್, ಹೆಚ್ಚುವರಿ ಔಷಧ ನಿಯಂತ್ರಕ ಇಲಾಖೆಯ ಡಾ.ಎಸ್. ಉಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net