ನ್ಯೂಸ್

ಎರಡು ಪೆಗ್ ಹಾಕಿದ್ರೆ ಡೋಂಟ್ ಕೇರ್.. ಹಾವಿಗೇ ಶಾಕ್ ಕೊಟ್ಟ ಕುಡುಕ!

ಬೆಂಗಳೂರು: ಹಾವು ಕಂಡರೆ ಯಾರು ತಾನೇ ಹೆದರುವುದಿಲ್ಲ ಹೇಳಿ, ಆದರೆ ಇಲ್ಲೊಬ್ಬ ಎಣ್ಣೆ ಏಟಲ್ಲಿ ನಾಗರಹಾವು ಸಮೀಪ ಕುಳಿತು, ಅದನ್ನು ಕೈಯಿಂದ ತಳ್ಳಲು ಯತ್ನಿಸುವ ಮೂಲಕ ವಿಷಸರ್ಪದ ಜೊತೆ ಸರಸಕ್ಕಿಳಿದಿದ್ದಾನೆ. ಈ ವ್ಯಕ್ತಿ ಮಾಡಿದ ಚೇಷ್ಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೀಡಿಯೋ ನೋಡಿದವರಿಗೆ ಆಶ್ಚರ್ಯವಾಗಿದೆ. ವೀಡಿಯೊವನ್ನು ಇನ್​ಸ್ಟಾಗ್ರಾಮ್​ ಹ್ಯಾಂಡಲ್ ಎ2ಜಡ್​_ವೆಂಕಟ್​ ನಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಸ್ತೆಬದಿಯ ಕಲ್ಲಿನ ಮೇಲೆ ಕುಳಿತು ಮದ್ಯ ಸೇವಿಸುತ್ತಿದ್ದಾನೆ. ಅಷ್ಟರಲ್ಲಿ ನಾಗರ ಹಾವೊಂದು ಅಲ್ಲಿಗೆ ಬಂದಿದೆ. ಆದರೆ ಅವನು ಅದಕ್ಕೆ ಹೆದರಲಿಲ್ಲ. ಆತ ನಾಗರಹಾವಿನ ಜೊತೆ ಆಟವಾಡಿದ್ದಾನೆ. ಹಾವಿನ ಹೆಡೆ ಮುಂದೆ ಕೈ ಹಾಕಿ ಹಲವು ಬಾರಿ ಹೊಡೆದಿದ್ದಾನೆ. ಅದಕ್ಕೆ ಸಾಕುಪ್ರಾಣಿಯಂತೆ ಮಾತಾಡಿದ್ದಾನೆ. ಆದರೆ ಹಾವು ಆತನಿಗೆ ಏನೂ ಮಾಡಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋವನ್ನು ಇದುವರೆಗೆ 1.35 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸುಮಾರು 4 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಆ ವಿಡಿಯೋಗೆ ನೆಟಿಜನ್‌ಗಳು ಕಾಮೆಂಟ್‌ ಮಾಡಿದ್ದಾರೆ. `ಆ ಹಾವಿಗೂ ನೈಂಟಿ ಬೇಕು', `ಅವನಿಗೆ ಕಚ್ಚಿದರೆ ಹಾವು ಸಾಯುತ್ತದೆ' ಎಂದು ಕಮೆಂಟ್ ಮಾಡಿದ್ದಾರೆ.