ನ್ಯೂಸ್

ಕಳ್ಳನೆಂದು ಮದುವೆಗೆ ಬಂದಿದ್ದ ವ್ಯಕ್ತಿಗೆ ಥಳಿತ; Shocking Video Viral

ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಇದೀಗ ಉತ್ತರಪ್ರದೇಶದಲ್ಲಿ ಮದುವೆಗೆ ಬಂದಿದ್ದ ಅತಿಥಿಯೊಬ್ಬರನ್ನು ಕಳ್ಳನೆಂದು ಭಾವಿಸಿ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.

ವೈರಲ್​ ಆಗಿರುವ ವಿಡಿಯೋ (Video Viral) ನೋಡುವುದಾದರೆ ಕುಡಿದ ಮತ್ತಿನಲ್ಲಿರುವ ವ್ಯಕ್ತಿಯನ್ನು ಜನರು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ಎಷ್ಟೇ ಥಳಿಸಿದರು ವ್ಯಕ್ತಿ ಏನು ಮಾತನಾಡದರೆ ಸುಮ್ಮನೇ ನಿಂತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಘಟನೆ ಬಗ್ಗೆ ಮಾತನಾಡಿರುವ ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು, ಡಿಯೋರಿಯಾದಲ್ಲಿ ಈ ಘಟನೆ ನಡೆದಿದ್ದು, ಗೋರಖ್​ಪುರದಲ್ಲಿ ಆರಂಭದಲ್ಲಿ ಮದುವೆ ಮೆರವಣಿಗೆಯು ತಾರ್ಕುಲ್ವಾ ಗ್ರಾಮದಲ್ಲಿರುವ ಕಲ್ಯಾಣ ಮಂಟಪಕ್ಕೆ ಆಗಮಿಸಿದೆ. ಈ ವೇಳೆ ಕುಡಿದ್ದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ದಾರಿ ತಪ್ಪಿ ವಿಳಾಸ ಕೇಳುವ ಸಲುವಾಗಿ ಮನೆಯ ಬಾಗಿಲೊಂದನ್ನು ಬಡಿದಿದ್ದಾನೆ.

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯನ್ನು ಕಂಡು ಕಳ್ಳೆ ಎಂದು ಭಾವಿಸಿದ ಜನರು ಆತನನ್ನು ಕರೆಂಟ್​ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದು, ಈ ವಿಚಾರ ತಿಳಿದ ಮದುವೆ ಮನೆಯಲ್ಲಿದ್ದ ಜನರು ಕೂಡಲೇ ಸ್ಥಳಕ್ಕೆ ತೆರಳಿ ಆತನನ್ನು ರಕ್ಷಿಸಿದ್ಧಾರೆ. ಗ್ರಾಮದಲ್ಲಿ ಕೆಳೆದ ಕೆಲ ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಪ್ಪಾದ ತಿಳುವಳಿಕೆಯಿಂದ ಈ ಘಟನೆ ನಡೆದಿದೆ. ಗಾಯಾಳುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.