ವಾಷಿಂಗ್ಟನ್ ಡಿಸಿ: ಹಾರಾಟದಲ್ಲಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಾಡಿದ ಗಲಾಟೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣದಿಂದ ಗ್ರೀಸ್ನ ಕಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ easyjet ವಿಮಾನದಲ್ಲಿ ಘಟನೆ ನಡೆದಿರುವುದಾಗಿ ನ್ಯೂಯಾರ್ಕ್ ಪೋಸ್ ವರದಿ ಮಾಡಿದೆ. ಮದ್ಯದ ಅಮಲಿನಲ್ಲಿ ಪ್ರಯಾಣಿಕರೊಬ್ಬರ ಗಲಾಟೆ ಆರಂಭಿಸಿ ಮ್ಯೂನಿಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವಂತೆ ಒತ್ತಾಯಿಸಿದರು ಎನ್ನಲಾಗಿದೆ.
ವಿಮಾನ ನಿಲ್ದಾಣದಿಂದ ಟೇಕಾಫ್ ಆದ U28235 ವಿಮಾನ ಎರಡು ಗಂಟೆಗಳ ಬಳಿಕ 30 ಸಾವಿರ ಅಡಿಗಳಷ್ಟು ಎತ್ತರದಲ್ಲಿದ್ದಾಗ ಗಲಾಟೆ ಮಾಡಲು ಆರಂಭಿಸಿ ಬಳಿಕ ಎದ್ದುನಿಂತು ಕ್ಯಾಪ್ಟ್ನ್ನ್ನು ನಿಂದಿಸುತ್ತಾ ಅವರ ಕೆಲಸಕ್ಕೆ ಅಡ್ಡಿಯುನ್ನುಂಟು ಮಾಡಿದ್ದಾರೆ. ಬಳಿಕ ಪ್ರಯಾಣಿಕರ ಈ ದುವರ್ತನೆಯಿಂದಾಗಿ ಫ್ಲೈಟ್ ಅನ್ನು ಲ್ಯಾಂಡಿಂಗ್ ಮಾಡಲಾಗಿದೆ. ಆರೋಪಿಯನ್ನು ಜರ್ಮನ್ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ವಿಮಾನದಲ್ಲಿದ್ದ ಇತರೆ ಪ್ರಯಾಣಿಕರು ನೆಮ್ಮದಿ ನಿಟ್ಟುಸಿರು ಬಿಟ್ಟಿರು. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಆರೋಪಿಯನ್ನು ಬಂಧಿಸಿದ ಬಳಿಕ ಮತ್ತೊಬ್ಬ ಪ್ರಯಾಣಿಕರು ಖುಷಿಯಿಂದ ಜೋರಾಗಿ ಪ್ರತಿಕ್ರಿಯಿಸಿರುವುದನ್ನು ಕಾಣಬಹುದಾಗಿದೆ.ನೀನು ಸೋತಿರುವೆ ದೂರ ಹೋಗು ಎಂದು ಆರೋಪಿಗೆ ಹೇಳುತ್ತಿದ್ದಾರೆ. ಇತರೆ ಪ್ರಯಾಣಿಕರು ಚಪ್ಪಾಳೆ ತಟ್ಟುತ್ತಿರುವುದನ್ನು ಕಾಣಬಹುದಾಗಿದೆ. ಕ್ಯಾಪ್ಟನ್ ಗದ್ದಲ ಸೃಷ್ಟಿಸಿದ್ದ ವ್ಯಕ್ತಿಯನ್ನು ಹಿಡಿದಿಟ್ಟುಕೊಂಡು ಪೊಲೀಸರು ವಶಕ್ಕೆ ನೀಡಿದಕ್ಕಾಗಿ ಪ್ರಯಾಣಿಕರು ಅವರಿಗೆ ಅಭಿನಂದಿಸಿದ್ದಾರೆ.
ಈ ಬಗ್ಗೆ ಏರ್‌ಲೈನ್ ಪ್ರತಿಕ್ರಿಯಿಸಿದ್ದು, ಪ್ರಯಾಣಿಕರೊಬ್ಬರು ದುವರ್ತನೆಯಿಂದ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಮಾತಿನ ಚಕಮಕಿಯಿಂದ ಆರಂಭವಾಗಿ ಗಲಾಟೆ ಮಾಡಿದ್ದಾಗಿ ಔಟ್ಲೆಟ್ ವರದಿ ಮಾಡಿದೆ. ಅಲ್ಲದೆ ಆನ್ಬೋರ್ಡ್ ಇಂಟರ್ಕಾಮ್ ಅನ್ನು ಮುರಿದು ವಿಮಾನ ಸಿಬ್ಬಂದಿಯೊಂದಿಗೆ ಜಗಳವಾಡಿ ಅವರ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಆದ್ದರಿಂದ ಅವರನ್ನು ಬಂಧಿಲಾಗಿದೆ ಎಂದು ಹೇಳಿದೆ. ಆದರೆ ಏರ್‌ಲೈನ್ ಆರೋಪಿಯ ಗುರುತನ್ನು ಬಹಿರಂಗಗೊಳಿಸಿಲ್ಲ.
ಈ ರೀತಿಯ ಘಟನೆ ಇದೇ ಮೊದಲನೆಲ್ಲಾ, ಪದೇಪದೆ ಪುನರಾವರ್ತನೆಯಾಗುತ್ತಿರುತ್ತದೆ. ಅಮೇರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಜಗಳ ಮಾಡಿ ಜೀವಬೆದರಿಕ ನೀಡಿದ್ದ ಅಮೆರಿಕದ ವ್ಯಕ್ತಿಯೊಬ್ಬನನ್ನು ಆಗಸ್ಟ್ನಲ್ಲಿ ಬಂಧಿಸಲಾಗಿದೆ. ಜುಲೈ 18ರಂದು ಸಿಯಾಟಲ್‌ನಿಂದ ಡಲ್ಲಾಸ್‌ಗೆ 2101 ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಎರಿಕ್ ನಿಕೋಲಸ್(26) ಎಂಬಾತನನ್ನು ಆತನ ಅಸ್ತಿನನ ವರ್ತನೆಯಿಂದಾಗಿ ಪೊಲೀಸರು ಬಂಧಿಸಿದ್ದರು. (ಏಜೆನ್ಸೀಸ್)